ಬಾಗಲಕೋಟೆ: ಒಂದು ವರ್ಷದ ಮಗುವಿನೊಂದಿಗೆ ತಾಯಿಯೊಬ್ಬರು ಬಾವಿಗೆ ಹಾರಿರುವ ಘಟನೆಯೊಂದು ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ರಾಘಾಪುರದಲ್ಲಿ ನಡೆದಿದೆ.
ಹಂಸನೂರ ಗ್ರಾಮದ ಫಕೀರವ್ವ (26)ವರ್ಷ ಎಂಬಾಕೆ ತನ್ನ ಒಂದು ವರ್ಷದ ಮಗುವಿನೊಂದಿಗೆ ಬಾವಿಗೆ ಜಿಗಿದಿದ್ದಾರೆ.
ಮಗು ಶಿವಾನಿ ಮೃತಪಟ್ಟಿದ್ದು, ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಫಕೀರವ್ವಳಿಗಾಗಿ ಬಾವಿಯಲ್ಲಿ ಹುಡುಕಾಟ ಮುಂದುವರಿಸಿದ್ದಾರೆ.
ಫಕೀರವ್ವ ಹೆರಿಗೆಗಾಗಿ ತನ್ನ ಅಜ್ಜಿಯ ಊರು ರಾಘಾಪುರಕ್ಕೆ ಬಂದಿದ್ದಳು. ಹೆರಿಗೆ ಬಳಿಕ ಗಂಡನ ಮನೆಯವರು ಆಕೆಯನ್ನು ಕರೆದುಕೊಂಡು ಹೋಗಲು ಬಂದಿದ್ದರು.
ಆದರೆ, ಫಕೀರವ್ವ ದಿಢೀರನೇ ತನ್ನ ಅಜ್ಜಿಯ ಜಮೀನಿನಲ್ಲಿ ಇರುವ ಬಾವಿಗೆ ಮಗುವಿನ ಜತೆಗೆ ಹಾರಿದ್ದಾಳೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಫಟನೆಗೆ ನಿಜವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ.
Post a Comment