ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುದಿಯುತ್ತಿರುವ ಅಡಕೆ ಬೇಯಿಸುವ ಹಂಡೆಗೆ ಬಿದ್ದ ಮಗು ಸಾವು

ಕುದಿಯುತ್ತಿರುವ ಅಡಕೆ ಬೇಯಿಸುವ ಹಂಡೆಗೆ ಬಿದ್ದ ಮಗು ಸಾವು

 


ಶಿವಮೊಗ್ಗ : ಕುದಿಯುತ್ತಿರುವ ಅಡಕೆ ಬೇಯಿಸುವ ಹಂಡೆಗೆ ಬಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆಯೊಂದು ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ನಡೆದಿದೆ.


ಮಂಜುನಾಥ್ ಎಂಬವರ ಪುತ್ರ 4 ವರ್ಷದ ಧನರಾಜ್ ಮೃತಪಟ್ಟ ಮಗುವಾಗಿದೆ


ಆ. 29 ರಂದು ಧನರಾಜ್ ಕುದಿಯುತ್ತಿದ್ದ ನೀರಿದ್ದ ಹಂಡೆಯೊಳಕ್ಕೆ ಬಿದ್ದಿದ್ದ. ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾನೆ.


ಮಂಜುನಾಥ್ ಅವರ ಮನೆ ಹಿಂಭಾಗ ಅಡಕೆ ಬೇಯಿಸುವ ಕಾರ್ಯ ಮುಂದುವರಿದಿದ್ದು, ಅಡಕೆ ಬೇಯಿಸುವ ಹಂಡೆಯ ಹತ್ತಿರ ಸ್ಟೂಲ್ ಒಂದನ್ನು ಇರಿಸಲಾಗಿತ್ತು. ಮನೆಯವರ ಗಮನಕ್ಕೆ ಬಾರದೆ ಈ ಕಡೆ ಬಂದ ಮಗು ಸ್ಟೂಲ್ ಹತ್ತಿ ಹಂಡೆಯ ಕಡೆ ಬಗ್ಗಿದಾಗ ಈ ಘಟನೆ ನಡೆದಿದೆ.


ಕುದಿಯುತ್ತಿದ್ದ ಅಡಕೆ ಹಂಡೆಗೆ ಬಿದ್ದ ಮಗು ಕೂಗಿದಾಕ್ಷಣ ಧಾವಿಸಿದ ಪೋಷಕರು ಮಗುವನ್ನು ರಕ್ಷಿಸಿದ್ದಾರೆ. 


ಆದರೆ ತೀವ್ರ ಸುಟ್ಟ ಗಾಯಗಳಾಗಿತ್ತು. ತಕ್ಷಣವೇ ಮಗುವನ್ನು ಶಿವಮೊಗ್ಗದ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. 


13 ದಿನಗಳ ಸತತ ಹೋರಾಟದ ಬಳಿಕ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

0 Comments

Post a Comment

Post a Comment (0)

Previous Post Next Post