ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಗೃಹರಕ್ಷಕರು ಬಹಳ ಕ್ರಿಯಾಶೀಲರಾಗಿದ್ದು, ಕೋವಿಡ್-19 ರೋಗದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಜಿಲ್ಲಾಡಳಿತ ಮತ್ತು ಪೊಲೀಸರ ಜೊತೆ ಕೈಜೋಡಿಸಿ ಸಮಾಜವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಅವರ ನಿಷ್ಕಾಮ ಸೇವೆ ನಿಜವಾಗಿಯೂ ಶ್ಲಾಘನೀಯ ಮತ್ತು ಸಮಾಜಕ್ಕೆ ಗೃಹರಕ್ಷಕರ ಕೊಡುಗೆ ಅನನ್ಯ ಎಂದು MCF ಇದರ ಹಿರಿಯ ವೈದ್ಯರಾದ ಡಾ|| ಯೋಗೀಶ್ ಅಭಿಪ್ರಾಯಪಟ್ಟರು.
ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕರ ಕಛೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳಕ್ಕೆ 500 ಸ್ಯಾನಿಟೈಸರ್ MCF ವತಿಯಿಂದ ಡಾ|| ಯೋಗೀಶ್ ಅವರು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಅವರಿಗೆ ಹಸ್ತಾಂತರಿಸಿದರು.
ಡಾ|| ಚೂಂತಾರು ಅವರು ಮಾತನಾಡಿ ಕೋವಿಡ್ ಒಂದನೇ ಅಲೆಯ ಸಂದರ್ಭದಲ್ಲೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳಕ್ಕೆ 500 ಸ್ಯಾನಿಟೈಸರ್ ನೀಡಿದ್ದಾರೆ. ಈಗ ಎರಡನೆ ಅಲೆ ಸಮಯದಲ್ಲಿಯೂ ಗೃಹರಕ್ಷಕರ ರಕ್ಷಣೆಗಾಗಿ ಮಗದೊಮ್ಮೆ 500 ಸ್ಯಾನಿಟೈಸರ್ ನೀಡಿ, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಗೃಹರಕ್ಷಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದಾರೆ. ಒಅಈ ಇದರ ನಿರ್ದೇಶಕರಾದ ಶ್ರೀ ಪ್ರಭಾಕರ್ ರಾವ್ ಮತ್ತು ಅವರ ತಂಡದ ಈ ಸೇವೆಯನ್ನು ಇಲಾಖೆ ಸದಾ ಸ್ಮರಿಸುತ್ತದೆ ಎಂದು ಡಾ|| ಚೂಂತಾರು ನುಡಿದರು.
ಈ ಸಂದರ್ಭದಲ್ಲಿ ಉಪಸಮಾದೇಷ್ಟರಾದ ರಮೇಶ್, ಸುರತ್ಕಲ್ ಘಟಕದ ಘಟಕಾಧಿಕಾರಿ ರಮೇಶ್ ಪೂಜಾರಿ, ಪಣಂಬೂರು ಘಟಕಾಧಿಕಾರಿ ಶಿವಪ್ಪ ನಾಯಕ್, ಉಳ್ಳಾಲದ ಸುನಿಲ್, ಅಬ್ದುಲ್ ಸಮದ್, ಮಂಗಳೂರು ಘಟಕದ ದಿವಾಕರ್, ದುಷ್ಯಂತ್ ಕಛೇರಿ ಸಿಬ್ಬಂದಿ ಶ್ರೀಮತಿ ಅನಿತಾ ಮುಂತಾದವರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment