ಮಂಗಳೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ದೇರೆಬೈಲ್ ಪೂರ್ವ ವಾರ್ಡ್ 23ರಲ್ಲಿ ಶ್ರೀದೇವಿ ಯುವಕ ಮಂಡಲ ಮಾಲೆಮಾರ್ ಅಂಗನವಾಡಿ ಶಾಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಕ್ತಿನಗರ ಮಂಗಳೂರು ಸಹಭಾಗಿತ್ವದಲ್ಲಿ, ಬುಧವಾರ (ಸೆ.8) ಒಟ್ಟು 250 ಮಂದಿಗೆ ಕೋವಿ ಶೀಲ್ಡ್ ಲಸಿಕೆ ನೀಡಲಾಯಿತು.
172 ಮಂದಿಗೆ ಮೊದಲ ಡೋಸ್ ಹಾಗೂ 78 ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಶ್ರೀದೇವಿ ಯುವಕ ಮಂಡಲದ ಕಾರ್ಯದರ್ಶಿಯಾದ ನವೀನ್, ವಾರ್ಡಿನ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್ ಉಪಸ್ಥಿತಿಯಲ್ಲಿ ಶಕ್ತಿ ಕೇಂದ್ರದ ಪ್ರಮುಖರಾದ ವಸಂತ್ ಕುಲಾಲ್ ಬೂತ್ ಪ್ರಮುಖರಾದ ಉಮೇಶ್, ಮೋಹನ್ ದಾಸ್, ಜಯಂತ್, ದಿನೇಶ್ ಶೆಣೈ, ಮೀನಾಕ್ಷಿ, ಸಂಧ್ಯಾ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment