ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮಂಗಳೂರು ಸಹಭಾಗಿತ್ವದಲ್ಲಿ, ಹಾಗೂ ಮಂಗಳೂರು ನಗರ ಉತ್ತರ ವಿಧಾನ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿಯವರ ಸಹಕಾರದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರವು ಶನಿವಾರ (ಆ.28)ರಂದು ಪ್ರಶಾಂತ್ ನಗರ ಬಡಾವಣೆಯ ಭಾರತ್ ಆಶ್ರಯ ಅಪಾರ್ಟ್ಮೆಂಟ್‌ನಲ್ಲಿ ಉತ್ತರ ಕ್ಷೇತ್ರದ 125, 126, 127 ದೇರೆಬೈಲ್-I ಪೂರ್ವ ಬೂತ್ ಮಟ್ಟದ ಉಚಿತ ಕೋವಿಡ್ ಲಸಿಕೆ ಶಿಬಿರ ನಡೆಯಿತು.
ಉತ್ತರ ಮಂಡಲದ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವೀಣಾ ನಾಯಕ್ ಹಾಗೂ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್ ಉದ್ಘಾಟಿಸಿದರು.
ಆರೋಗ್ಯ ಕೇಂದ್ರದ ವತಿಯಿಂದ ನಮ್ಮ ನಗರದಲ್ಲಿ ಕೋವಿಶೀಲ್ಡ್ ಲಸಿಕೆಯು 18 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಹಾಗೂ 84 ದಿವಸ ಪೂರ್ತಿ ಆದವರಿಗೆ ಎರಡನೆಯ ಡೋಸ್ ನೀಡಲಾಯಿತು. ಸ್ಥಳೀಯ ನಾಗರಿಕರು ಈ ಶಿಬಿರದಿಂದ ಲಸಿಕೆಯನ್ನು ಪಡೆದರು. ಒಟ್ಟು 530 ಡೋಸ್ ಲಸಿಕೆ ನೀಡಲಾಯಿತು.
ನೆಕ್ಕಿಲ ಗುಡ್ಡೆ ಶಕ್ತಿಕೇಂದ್ರದ ಪ್ರಮುಖರಾದ ಸೂರ್ಯನಾರಾಯಣ ತುಂಗ, ಆಲ್ವಿನ್ ಕ್ವಾಡ್ರಸ್, ಯುವನಾಯಕ ಚರಿತ್ ಪೂಜಾರಿ, ಬೂತ್ ಅಧ್ಯಕ್ಷರಾದ ಕೃಷ್ಣಪ್ರಸಾದ್, ಪ್ರೀತಮ್, ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ವಿ. ಆರ್, ಹರ್ಷ ರಾವ್ ಹಾಗೂ ಕಾರ್ಯಕರ್ತರಾದ ಸಚಿನ್ ಗುರ್ಜರ್, ವಲೇರಿಯನ್ ಮಸ್ಕರೇನಸ್, ಮನಿಷ್ ರಾವ್, ದೇವೇಂದ್ರ, ಶುಕರಾಜ್ ಕೊಟ್ಟಾರಿ, ರಾಮಚಂದ್ರ, ರಾಕೇಶ್ ಮುಂತಾದವರು ಉಪಸ್ಥಿತರಿದ್ದರು. ಭಾರತ್ ಆಶ್ರಯ ಅಪಾರ್ಟ್ಮೆಂಟ್ ಅಲ್ಲಿ ಈ ಶಿಬಿರವನ್ನು ನಡೆಸಲು ರಕ್ಷಿತ್ ಎ. ಕುಮಾರ್, ಫ್ರಾನ್ಸಿಸ್ ಸಲ್ಡಾನ, ಬಾಲಕೃಷ್ಣ ಶೆಣೈ, ವಿಕ್ರಮ್ ಶೆಣೈ ಇವರು ಸ್ಥಳಾವಕಾಶ ಒದಗಿಸಿಕೊಟ್ಟು ಸಹಕರಿಸಿದ್ಧರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق