ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೆ.8: 'ಸಾಕ್ಷರತೆಯ ಸಾಕ್ಷಿಗಳು' ಉಪನ್ಯಾಸ

ಸೆ.8: 'ಸಾಕ್ಷರತೆಯ ಸಾಕ್ಷಿಗಳು' ಉಪನ್ಯಾಸ


ಮಂಗಳೂರು: ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ವಿಶ್ವ ಸಾಕ್ಷರತಾ ದಿನದ ಪ್ರಯುಕ್ತ ಸೆಪ್ಟೆಂಬರ್ 8 ರಂದು ರಾತ್ರಿ 8 ಗಂಟೆಗೆ 'ಸಾಕ್ಷರತೆಯ ಸಾಕ್ಷಿಗಳು' ಎಂಬ ವಿಶೇಷ ಉಪನ್ಯಾಸವನ್ನು ಮಂಗಳೂರಿನಲ್ಲಿ ವೆಬಿನಾರ್ ಮೂಲಕ ಆಯೋಜಿಸಲಾಗಿದೆ. ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು ಇದರ ಪ್ರಬಾರ ನಿರ್ದೇಶಕ ಡಾ|ಟಿ. ವೆಂಕಟೇಶ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ.


ಮಂಗಳೂರು ಚುಸಾಪ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಸ್ತಾವಿಸುವರು. ಜಿಲ್ಲಾ ಚುಸಾಪ ಅಧ್ಯಕ್ಷ ಇರಾ ನೇಮು ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.ಜಿಲ್ಲಾ ಚುಸಾಪ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಉಪಸ್ಥಿತರಿರುವರು. ಆಸಕ್ತರು https://meet.google.com/sux-pbdo-ngb ಗೂಗಲ್ ಮೀಟ್ ಕೊಂಡಿ ಮೂಲಕ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 تعليقات

إرسال تعليق

Post a Comment (0)

أحدث أقدم