ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೌರಿ ಗಣೇಶ ಹಬ್ಬದ ಪ್ರಯುಕ್ತ ಅಪ್ಪ ಮಗಳು ಬಾಗಿನ ಕೊಟ್ಟು ಮರಳುವ ವೇಳೆ ದುರಂತ

ಗೌರಿ ಗಣೇಶ ಹಬ್ಬದ ಪ್ರಯುಕ್ತ ಅಪ್ಪ ಮಗಳು ಬಾಗಿನ ಕೊಟ್ಟು ಮರಳುವ ವೇಳೆ ದುರಂತ

 


ಚಿಕ್ಕಮಗಳೂರು; ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ಕೊಟ್ಟು ಮರಳುತ್ತಿದ್ದ ಅಪ್ಪ-ಮಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ.


ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ಟಿವಿಎಸ್ ನಲ್ಲಿ ಅಪ್ಪ-ಮಗಳು ಹಿಂತಿರುಗುವ ವೇಳೆ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದಿದೆ


ಈ ದುರಂತ ದಲ್ಲಿ ಚಿಕ್ಕಮಗಳೂರು ತಾಲೂಕಿನ ಮುಗುಳವಳ್ಳಿ‌ ಗ್ರಾಮದ ನಿವಾಸಿ ಜಯಣ್ಣ (58) ವರ್ಷ ಮತ್ತು ಮಗಳು ರಕ್ಷಿತಾ (19) ವರ್ಷ ಮೃತಪಟ್ಟಿದ್ದಾರೆ.


ಪಿಳ್ಳೇನಹಳ್ಳಿಯಲ್ಲಿನ ದೊಡ್ಡ ಮಗಳ ಮನೆಗೆ ಬಾಗಿನ ಕೊಡಲು ತಂದೆ ಜಯಣ್ಣ ಚಿಕ್ಕ ಮಗಳ ಜೊತೆ ಹೋಗಿದ್ದರು. 


ಬಾಗಿನ ಕೊಟ್ಟು ವಾಪಸ್ ಬರುವಾಗ ದುರಂತ ಸಂಭವಿಸಿದೆ. ಈ ಬಗ್ಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 تعليقات

إرسال تعليق

Post a Comment (0)

أحدث أقدم