ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಇಟಿ 2021 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಸಿಇಟಿ 2021 ಪರೀಕ್ಷೆಯಲ್ಲಿ ಅಂಬಿಕಾ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಎರಡು ಸಾವಿರದೊಳಗೆ ಐದು ರಾಂಕ್, ಐದು ಸಾವಿರದೊಳಗೆ 22 ರಾಂಕ್


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ 2021 ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮೆರೆದಿದ್ದಾರೆ.


ಬಂಟ್ವಾಳದ ಕೊಳ್ನಾಡು ಗ್ರಾಮದ ಬರೆಬೆಟ್ಟಿನ ನಿವಾಸಿಗಳಾದ ಕೆ.ವಿ.ಸೋಮಶೇಖರ ಶೆಟ್ಟಿ ಹಾಗೂ ಪೂರ್ಣಿಮಾ ದಂಪತಿಗಳ ಪುತ್ರ ಪುಷ್ಪರಾಜ ಶೆಟ್ಟಿ ಕೆ.ಎಸ್ ಇಂಜಿನಿಯರಿಂಗ್ ವಿಭಾಗದಲ್ಲಿ 1020ನೇ ರಾಂಕ್ ಗಳಿಸಿದರೆ, ಪುತ್ತೂರಿನ ಆರ್ಯಾಪಿನ ಅನಂತನಾರಾಯಣ ಬಿ ಹಾಗೂ ಶಂಕರಿ ಬಿ ದಂಪತಿಗಳ ಪುತ್ರ ಅಚಿಂತ್ಯಕೃಷ್ಣ ಬಿ ಇಂಜಿನಿಯರಿಂಗ್ ವಿಭಾಗದಲ್ಲಿ 1373ನೇ ರಾಂಕ್ ಗಳಿಸಿದ್ದಾರೆ. ಬಂಟ್ವಾಳದ ಪೇರಮೊಗರುವಿನ ಸತಿಕಲ್ಲು ನಿವಾಸಿಗಳಾದ ಎಂ.ಅಬ್ದುಲ್ ಶುಕೂರ್ ಹಾಗೂ ನಸೀಮಾ ಬಾನು ದಂಪತಿ ಪುತ್ರ ಎಸ್.ಮೊಹಮ್ಮದ್ ಆಶಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ 1749 ಹಾಗೂ ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 1376ನೇ ರಾಂಕ್ ಗಳಿಸಿರುತ್ತಾರೆ.


ಸುಳ್ಯದ ಮುರುಳ್ಯ ನಿವಾಸಿಗಳಾದ ವಸಂತ ವಿ.ಎಂ.ರೈ ಹಾಗೂ ಶಶಿಕಲಾ ರೈ ದಂಪತಿ ಪುತ್ರಿ ವರ್ಷಾ ವಿ ರೈ ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 1823ನೇ ರಾಂಕ್ ದಾಖಲಿಸಿದ್ದಾರೆ. ಬಂಟ್ವಾಳದ ಬುಡೋಳಿಯ ಕೊಪ್ಪಳ ನಿವಾಸಿಗಳಾದ ಕೃಷ್ಣ ಕುಮಾರ್ ಎನ್ ಹಾಗೂ ವಿಜಯಲಕ್ಷ್ಮೀ ವಿ.ಕೆ ದಂಪತಿ ಪುತ್ರಿ ಶ್ರೀಲಕ್ಷ್ಮೀ ಎನ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 2583ನೇ ರಾಂಕ್, ವೆಟರ್ನರಿ ವಿಭಾಗದಲ್ಲಿ 2517ನೇ ರಾಂಕ್ ಹಾಗೂ ಬಿ ಫಾರ್ಮಾ ವಿಭಾಗದಲ್ಲಿ 3261ನೇ ರಾಂಕ್ ಗಳಿಸಿದ್ದಾರೆ.


ಪುತ್ತೂರಿನ ಪಡೀಲಿನವರಾದ ಎನ್.ರವೀಂದ್ರ ಪೈ ಹಾಗೂ ಛಾಯಾ ಆರ್ ಪೈ ಪುತ್ರಿ ಎನ್ ರಮ್ಯಾ ಪೈ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 2785ನೇ ರಾಂಕ್, ವೆಟರ್ನರಿ ವಿಭಾಗದಲ್ಲಿ 2782ನೇ ರಾಂಕ್, ಬಿ ಫಾರ್ಮಾ ವಿಭಾಗದಲ್ಲಿ 3530ನೇ ರಾಂಕ್ ಹಾಗೂ ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 4519ನೇ ರಾಂಕ್ ಗಳಿಸಿದ್ದಾರೆ. ಪುತ್ತೂರಿನ ದರ್ಭೆ ನಿವಾಸಿಗಳಾದ ರಾಜೇಶ್ ಎಂ.ಆರ್ ಹಾಗೂ ಸಪ್ನಾ ಆರ್ ರಾವ್ ಪುತ್ರಿ ಅನಘಾ ರಾವ್ ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 3438ನೇ ರಾಂಕ್ ಹಾಗೂ ವೆಟರ್ನರಿ ವಿಭಾಗದಲ್ಲಿ 4170ನೇ ರಾಂಕ್ ಗಳಿಸಿದ್ದಾರೆ.


ಪುತ್ತೂರಿನ ಬಪ್ಪಳಿಗೆ ನಿವಾಸಿಗಳಾದ ಇ ನಾರಾಯಣ ಹೇರಳೆ ಹಾಗೂ ಇ ರೇಖಾ ಹೇರಳೆ ದಂಪತಿ ಪುತ್ರ ಇ ಶ್ರೇಯಸ್ ಹೇರಳೆ ಇಂಜಿನಿಯರಿಂಗ್ ವಿಭಾಗದಲ್ಲಿ 3661ನೇ ರಾಂಕ್ ದಾಖಲಿಸಿದ್ದಾರೆ. ಬಂಟ್ವಾಳದ ನೇರಳಕಟ್ಟೆಯ ನೆಟ್ಲಮುಡ್ನೂರು ಗ್ರಾಮದ ಶ್ರೀಧರ ರೈ ಕೆ ಹಾಗೂ ರತ್ನಾ ರೈ ದಂಪತಿ ಪುತ್ರಿ ಅನೂಷಾ ರೈ ಕೆ ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 3888ನೇ ರಾಂಕ್ ಗಳಿಸಿದ್ದಾರೆ. ಮೈಸೂರಿನ ವಿಜಯನಗರದ ರಾಜು ಹಾಗೂ ತನುಜಾ ದಂಪತಿ ಪುತ್ರಿ ರಕ್ಷಿತಾ ಆರ್ ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 3922ನೇ ರಾಂಕ್ ಹಾಗೂ ವೆಟರ್ನರಿ ವಿಭಾಗದಲ್ಲಿ 3789ನೇ ರಾಂಕ್ ಗಳಿಸಿದ್ದಾರೆ.


ಪುತ್ತೂರಿನ ಸಾಲ್ಮರದ ಆರ್ ಶಿವರಾಮನ್ ಹಾಗೂ ಎಸ್ ರಾಜಲಕ್ಷ್ಮೀ ದಂಪತಿ ಪುತ್ರ ಧನುಷ್ ರಾಜನ್ ಎಸ್ ಇಂಜಿನಿಯರಿಂಗ್ ವಿಭಾಗದಲ್ಲಿ 4479ನೇ ರಾಂಕ್ ದಾಖಲಿಸಿದ್ದಾರೆ. ಪುತ್ತೂರಿನ ಕರ್ನೂರ್ ನಿವಾಸಿಗಳಾದ ಮಹಾಬಲ ರೈ ಕೆ ಹಾಗೂ ಜಯಂತಿ ದಂಪತಿ ಪುತ್ರ ಶ್ರೇಯಸ್ ರೈ ಕೆ  ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 4781ನೇ ರಾಂಕ್, ವೆಟರ್ನರಿ ವಿಭಾಗದಲ್ಲಿ 4763ನೇ ರಾಂಕ್ ಹಾಗೂ ಅಗ್ರಿಕಲ್ಚರ್ ಬಿಎಸ್ಸಿ  ವಿಭಾಗದಲ್ಲಿ 4533ನೇ ರಾಂಕ್ ಗಳಿಸಿದ್ದಾರೆ. ಬಂಟ್ವಾಳದ ಪೇರಮೊಗರುವಿನ ಕೆ.ವಿ.ತಿರುಮಲೇಶ್ವರ ಭಟ್ ಹಾಗೂ ಕೆ.ಟಿ.ಆಶಾ ದಂಪತಿ ಪುತ್ರಿ ಅಖಿಲಾ ಕೆ.ಟಿ ಇಂಜಿನಿಯರಿಂಗ್ ವಿಭಾಗದಲ್ಲಿ 7895ನೇ ರಾಂಕ್, ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 9570ನೇ ರಾಂಕ್, ವೆಟರ್ನರಿ ವಿಭಾಗದಲ್ಲಿ 9578ನೇ ರಾಂಕ್ ಹಾಗೂ ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 6665ನೇ ರಾಂಕ್ ಗಳಿಸಿದ್ದಾರೆ.


ಸುಳ್ಯದ ಅಮರ ಪಡ್ನೂರು ನಿವಾಸಿಗಳಾದ ಶಾಮಯ್ಯ ಕೆ ಹಾಗೂ ಶಶಿಕಲಾ ದಂಪತಿ ಪುತ್ರಿ ಸಿಂಚನಾ ಕೆ ಅಗ್ರಿಕಲ್ಚರ್ ಬಿಎಸ್ಸಿ ವಿಭಾಗದಲ್ಲಿ 8247ನೇ ರಾಂಕ್, ವೆಟರ್ನರಿ ಸೈನ್ಸ್ ವಿಭಾಗದಲ್ಲಿ 9485ನೇ ರಾಂಕ್ ಹಾಗೂ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವಿಭಾಗದಲ್ಲಿ 9486ನೇ ರಾಂಕ್ ದಾಖಲಿಸಿದ್ದಾರೆ. ಪುತ್ತೂರಿನ ಕರ್ಮಳದ ಪುಂಡರೀಕ ಮತ್ತು ರತ್ನಾವತಿ ದಂಪತಿ ಪುತ್ರ ಆಕಾಶ್ ಕೆ.ಪಿ ಇಂಜಿನಿಯರಂಗ್ ವಿಭಾಗದಲ್ಲಿ 9794ನೇ ರಾಂಕ್ ಗಳಿಸಿದರೆ ಬಂಟ್ವಾಳದ ಕೆದಿಲ ಗ್ರಾಮದ ಶ್ರೀಧರ ಹಾಗೂ ವನಿತಾ ದಂಪತಿ ಪುತ್ರಿ ಸುರಕ್ಷಾ ಎಸ್ ಸಾಲಿಯಾನ್ ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 10563ನೇ ರಾಂಕ್ ಗಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post