ದಾವಣಗೆರೆ: ಚನ್ನಗಿರಿ ತಾಲೂಕಿನ ಹೊನ್ನೇಭಾಗಿ ಗ್ರಾಮದ ಬಳಿ ಬೈಕ್ ಗೆ ಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಅಜ್ಜಯ್ಯ(18)ವರ್ಷ ,ಮಂಜುನಾಥ್ (17)ವರ್ಷ, ದೇವರಾಜ್ (17)ವರ್ಷ, ಮೃತರು. ಬುಲೆರೋ ವಾಹನದ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಬುಲೆರೋ ಬೈಕ್ ಗೆ ಗುದ್ದಿದೆ.
ಈ ದುರಂತ ದಲ್ಲಿ ಬೈಕ್ ನಲ್ಲಿದ್ದ ಈ ಮೂವರು ಮೃತಪಟ್ಟಿದ್ದಾರೆ.
ನಗರದ ಮಲ್ಲೇಶಪುರ ನಿವಾಸಿಗಳಾದ ಮೃತ ಯುವಕರು, ಗಣಪತಿ ಪ್ರತಿಷ್ಠಾನ ಕ್ಕೆ ಅನುಮತಿ ಪಡೆಯಲು ಚನ್ನಗಿರಿಗೆ ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
إرسال تعليق