ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಕುವೆಟ್ಟು ಮಹಾಶಕ್ತಿ ಕೇಂದ್ರದ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದೀಜಿಯವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ದೇಶವನ್ನು ಮುನ್ಬಡೆಸುವ ಶಕ್ತಿ ಹಾಗೂ ಆರೋಗ್ಯ ಸಿಗಲೆಂದು ಪ್ರಾರ್ಥಿಸಿ ಶುಕ್ರವಾರ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಮೋದೀಜಿ ಅವರಿಗೆ ಆಯುರಾರೋಗ್ಯ ಲಭಿಸಲೆಂದು ಪ್ರಾರ್ಥಿಸಿದರು.
ಕುವೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮಚ್ಚಿನ, ಮಹಾ ಶಕ್ತಿ ಕೇಂದ್ರ ಪ್ರಮುಖರಾದ ಮಮತಾ ಎಂ. ಶೆಟ್ಟಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಮಂಡಲ ಉಪಾಧ್ಯಕ್ಷೆ ವಸಂತಿ ಮಚ್ಚಿನ, ಮಂಡಲ ಪ್ರಶಿಕ್ಷಣ ಸಹಸಂಚಾಲಕ ರಾಜೇಶ್ ಪೆಂರ್ಬುಡ, ಕಳಿಯ ಶಕ್ತಿಕೇಂದ್ರ ಅಧ್ಯಕ್ಷ ಶೇಖರ್ ನಾಯ್ಕ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಕೆ., ಸದಸ್ಯರಾದ ಸುಧಾಕರ ಮಜಲು, ಯಶೋದರ ಶೆಟ್ಟಿ, ವಿಜಯ ಗೌಡ, ಇಂದಿರಾ ಭಂಡಾರಿಕೋಡಿ, ಕಳಿಯ ಬೂತ್ 150ರ ಅಧ್ಯಕ್ಷ ಪ್ರಕಾಶ್ ಮೇರ್ಲ, ಕಾರ್ಯದರ್ಶಿ ಯಶೋದರ ಗೌಡ, ಪಕ್ಷದ ಪ್ರಮುಖರಾದ ಕರುಣಾಕರ ಕೊರಂಜ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಜಿ. ಇದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment