ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೋಹಿತ್ ಕೆ.ಜಿ. ನಿಧನ

ರೋಹಿತ್ ಕೆ.ಜಿ. ನಿಧನ

 



ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ರೋಹಿತ್ ಕೆ.ಜಿ (46) ಸೆ.21ರಂದು  ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಪುತ್ತೂರಿನ ಬಿ.ಎಂ. ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದ ಇವರು ನಂತರ ಎಂ.ಬಿ.ಎ ಶಿಕ್ಷಣ ಪೂರೈಸಿ ಹಲವಾರು ವರ್ಷಗಳ ಕಾಲ ದುಬೈಯಲ್ಲಿ ಉದ್ಯೋಗಿಯಾಗಿ ಇತ್ತೀಚೆಗಷ್ಟೇ ತಾಯ್ನಾಡಿಗೆ ಆಗಮಿಸಿದ್ದರು.


ದುಬೈ ಕನ್ನಡ ಸಂಘದಲ್ಲೂ ಸಕ್ರಿಯರಾಗಿ ಕೆಲಸ ಮಾಡಿದ್ದ ರೋಹಿತ್ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಇವರು ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅಂಕೋಲದ ಕೋನಾಳದವರಾದ ಪ್ರೊ.ಜಿ.ಟಿ.ಭಟ್ ಹಾಗೂ ಜಯಶ್ರೀ ಜಿ.ಟಿ ಭಟ್ ದಂಪತಿ ಪುತ್ರ. ರೋಹಿತ್ ಅವರು ತಂದೆ, ತಾಯಿ, ಪತ್ನಿ ಚೇತನಾ, ಮಕ್ಕಳಾದ ಸಿದ್ದಾರ್ಥ ಮತ್ತು ಸಿರಿ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم