ಸಿಂದಗಿ : ಎರಡು ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ನಗರದ ಹೊರವಲಯದ ರಸ್ತೆಯಲ್ಲಿರುವ ಲೋಯಲ್ ಶಾಲೆಯ ಬಳಿ ಮುಂಜಾನೆ ಸಂಭವಿಸಿದೆ.
ಜೇವರಗಿ ಕಡೆಯಿಂದ ಸಿಂದಗಿ ಕಡೆಗೆ ಹೊರಟಿದ್ದ ಲಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆ ಮುಂಜಾನೆ ಸುಮಾರು 5 ಗಂಟೆ ಹೊತ್ತಿಗೆ ನಡೆದಿದೆ.
ಘಟನೆಯಲ್ಲಿ ಗಾಯಗೊಂಡವರ ವಿವರ ಇನ್ನೂ ತಿಳಿಯಬೇಕಾಗಿದೆ. ಅಪಘಾತದಲ್ಲಿ ಎರಡು ಲಾರಿಗಳು ನುಜ್ಜುಗುಜ್ಜಾಗಿವೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Post a Comment