ಬೆಂಗಳೂರು : ಗಣೇಶ ಹಬ್ಬದ ದಿನದಂದೇ ಸಿಲಿಕಾನ್ ಸಿಟಿಯ ರಾಜಕುಮಾರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಕೆ ಎಸ್ ಆರ್ ಟಿ ಸಿ ಹಾಗೂ ವಾಯುವ್ಯ ಸಾರಿಗೆ ನಡುವೆ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಎರಡು ಬಸ್ ಜಖಂ ಗೊಂಡಿದ್ದು, ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.
ಹಾಗೆಯೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ನಡೆದ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ಮಾಡಿ ಪರೀಶಿಲನೆ ನಡೆಸಿದ್ದಾರೆ.
Post a Comment