ತುಮಕೂರು; ಕೌಟುಂಬಿಕ ಕಲಹದ ಹಿನ್ನೆಲೆ ರೊಚ್ಚಿಗೆದ್ದ ಪತ್ನಿ, ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಶವವನ್ನು ಚರಂಡಿಗೆ ಎಸೆದು ಕೃತ್ಯ ಎಸಗಿದ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.
ತುಮಕೂರು ನಗರದ ಬಡ್ಡಿಹಳ್ಳಿಯ ನಿವಾಸಿ ನಾರಾಯಣ 52 ವರ್ಷ ಮೃತ ದುರ್ದೈವಿ. ಅನ್ನಪೂರ್ಣ (45)ವರ್ಷ ಪತ್ನಿ.
ಮದುವೆ ನಂತರ ಕಳೆದ 8 ವರ್ಷಗಳಿಂದ ಪತಿ ಮತ್ತು ಪತ್ನಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿದ್ದು, ಇತ್ತೀಚೆಗೆ ಜಗಳ ನಡೆದಾದ ಸಿಟ್ಟಿಗೆದ್ದ ಪತ್ನಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ.
ಅಷ್ಟು ಮಾತ್ರವಲ್ಲದೇ ಆಕೆಯ ಕೋಪ ಕಡಿಮೆ ಆಗದೇ ಚರಂಡಿಗೆ ಶವವನ್ನು ಎಸೆದಿದ್ದಾಳೆ.
ಪತಿ ನಾರಾಯಣ ನೆಲಮಂಗಲ ಟೋಲ್ ಬಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಅನ್ನಪೂರ್ಣಗೆ ಅಕ್ರಮ ಸಂಬಂಧ ಇದ್ದು, ಈ ಬಗ್ಗೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق