ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಳಿ ತಪ್ಪಿ ನದಿಗೆ ಉರುಳಿ ಬಿದ್ದ ಗೂಡ್ಸ್ ರೈಲು

ಹಳಿ ತಪ್ಪಿ ನದಿಗೆ ಉರುಳಿ ಬಿದ್ದ ಗೂಡ್ಸ್ ರೈಲು

 


ಭುವನೇಶ್ವರ್ - ಹಳಿ ತಪ್ಪಿ ಗೂಡ್ಸ್ ರೈಲು ನದಿಗೆ ಉರುಳಿಬಿದ್ದಿರುವ ಘಟನೆಯೊಂದು ಒಡಿಸ್ಸಾದಲ್ಲಿ ಇಂದು ಮುಂಜಾನೆ ನಡೆದಿದೆ. 


ಆರು ಭೋಗಿಗಳ ಗೂಡ್ಸ್ ರೈಲು ಅಂಗುಲ್-ತಲ್ಚಾರ್ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಹಳಿ ತಪ್ಪಿ ನದಿಗೆ ಉರುಳಿಬಿದ್ದಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ನದಿಗೆ ಉರುಳಿಬಿದ್ದ ಆರು ಬೋಗಿಗಳಲ್ಲಿದ್ದ ಗೋಧಿ ನದಿ ಪಾಲಾಗಿದೆ. 


ಸದ್ಯ ರೈಲು ಇಂಜಿನ್ ಹಳಿ ಮೇಲೆ ಇದ್ದ ಪರಿಣಾಮ ಚಾಲಕ ಹಾಗೂ ಇನ್ನಿತರ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

0 تعليقات

إرسال تعليق

Post a Comment (0)

أحدث أقدم