ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಾಣಿಜ್ಯ ಶಿಕ್ಷಣ ಮತ್ತು ಅವಕಾಶಗಳು: ನಾಳೆ ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ

ವಾಣಿಜ್ಯ ಶಿಕ್ಷಣ ಮತ್ತು ಅವಕಾಶಗಳು: ನಾಳೆ ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ



ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜು ಮತ್ತು ಸಿಎ ತರಬೇತಿ ಸಂಸ್ಥೆ ವಿಕಾಸ್ ಇದರ ಸಹಯೋಗದೊಂದಿಗೆ ಉಪನ್ಯಾಸಕರಿಗೆ ಮತ್ತು ಆಸಕ್ತರಿಗೆ ವಾಣಿಜ್ಯ ಶಿಕ್ಷಣ ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಅಗಸ್ಟ್ 4 ರಂದು ಪೂರ್ವಾಹ್ನ 10 ಗಂಟೆಗೆ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ವೃತ್ತಿಪರ ಕೋರ್ಸ್ ತರಬೇತುದಾರ ರಾಜ್‌ ಗಣೇಶ್ ಕಾಮತ್ ಮಾಹಿತಿ ನೀಡಲಿದ್ದಾರೆ. ಆಸಕ್ತರಿಗೆ ಇದರ ಜೊತೆಗೆ ಸಿಎ ತರಬೇತಿಯು ನಡೆಯಲಿದೆ. ಈ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ದೂರವಾಣಿ ಸಂಖ್ಯೆ 8971634042 ಅಥವಾ 9686524162 ಯನ್ನು ಸಂಪರ್ಕಿಸಬೇಕೆಂದು ಸೂಚಿಸಲಾಗಿದೆ.


Upayuktha

0 Comments

Post a Comment

Post a Comment (0)

Previous Post Next Post