ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಂಪಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಉಪರಾಷ್ಟ್ರಪತಿ

ಹಂಪಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಉಪರಾಷ್ಟ್ರಪತಿ

 


ಬೆಂಗಳೂರು ; ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಕುಟುಂಬ ಸಮೇತರಾಗಿ ಹಂಪಿಯ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದರು.


ಈ ವೇಳೆಯಲ್ಲಿ ಇಲ್ಲಿನ ಪ್ರಸಿದ್ಧ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಿದರು


ಉಪ ರಾಷ್ಟ್ರಪತಿಗಳನ್ನು ಇಲ್ಲಿನ ಜಿಲ್ಲಾಡಳಿತ ಕೆಂಪು ಹಾಸಿನ ಮೂಲಕ ಸ್ವಾಗತ ಕೋರಿತು.


ಕೃಷ್ಣ ದೇವರಾಯ ಅವರ ಸಾಮ್ರಾಜ್ಯದ ಕುರುಹುಗಳಾದ ಪ್ರಮುಖ ಸ್ಥಳಗಳನ್ನು ಅವರು ವೀಕ್ಷಿಸಿದರು.


ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆಯಲ್ಲಿ ಭಾಗಿಯಾದರು.


ಉಪರಾಷ್ಟ್ರಪತಿಗಳ ಆಗಮನದ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್​ ನಡೆಸಲಾಗಿತ್ತು.


ನಿನ್ನೆ ರಾತ್ರಿಯೇ ಹಂಪಿಗೆ ಬಂದಿಳಿದ ಅವರು ಶುಕ್ರವಾರ ಹೊಸಪೇಟೆಯ ತುಂಗಾಭದ್ರಾ ಅಣೆಕಟ್ಟಿನ ವೀಕ್ಷಣೆ ನಡೆಸಿದ್ದರು.

0 تعليقات

إرسال تعليق

Post a Comment (0)

أحدث أقدم