ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾನಸಿಕ ಅಸ್ವಸ್ಥ ವೃದ್ದೆ ನೇಣಿಗೆ ಶರಣು

ಮಾನಸಿಕ ಅಸ್ವಸ್ಥ ವೃದ್ದೆ ನೇಣಿಗೆ ಶರಣು

 


ಶಿಗ್ಗಾಂವಿ
: ಮಾನಸಿಕ ಅಸ್ವಸ್ಥ ವೃದ್ಧೆಯೊಬ್ಬರು ನೇಣಿಗೆ ಶರಣಾದ ಘಟನೆಯೊಂದು ಪಟ್ಟಣದ ಅಂಬೇಡ್ಕರ್‌ ಓಣಿಯ ಮನೆಯೊಂದರಲ್ಲಿ ಸಂಭವಿಸಿದೆ. ನೇಣಿಗೆ ಶರಣಾದ ವೃದ್ಧ ಮಹಿಳೆಯನ್ನು ವಿಜಯಲಕ್ಷ್ಮಿ ಕೋಂ ರಾಮಪ್ಪ ಧಾರವಾಡ (65) ವರ್ಷ ಎಂದು ತಿಳಿದು ಬಂದಿದೆ.


ಮೃತ ವೃದ್ಧೆ ಮಾನಸಿಕ ಅಸ್ವಸ್ಥಳಾಗಿದ್ದು ಆಸ್ಪತ್ರೆಗೆ ಕರೆದೊಯ್ದರೂ ಫಲಕಾರಿಯಾಗಿರಲಿಲ್ಲ. ಜೊತೆಗೆ ಊಟವನ್ನೂ ಮಾಡುತ್ತಿರಲಿಲ್ಲ, ಹಾಗೆಯೇ ಇದ್ದು. ಅಕೆಯನ್ನು ಮನೆಯವರೇ ಸಮಾಧಾನಪಡಿಸಿ ಊಟ ಮಾಡಿಸುತ್ತಿದ್ದರು.


ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಸೀರೆಯಿಂದ ನೇಣು ಹಾಕಿಕೊಂಡಿದ್ದಾಳೆ. 


ಈ ಬಗ್ಗೆ ಶಿಗ್ಗಾಂವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



0 تعليقات

إرسال تعليق

Post a Comment (0)

أحدث أقدم