ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರ್ಕಳ; ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ತಾಯಿ ಮಗು ಮೃತ್ಯು

ಕಾರ್ಕಳ; ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ತಾಯಿ ಮಗು ಮೃತ್ಯು

 


ಕಾರ್ಕಳ : ತಾಯಿ ಹಾಗೂ 3 ವರ್ಷದ ಮಗು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನಪ್ಪಿರುವ ಘಟನೆಯೊಂದು ಕಾರ್ಕಳದ ಕೆರ್ವಾಶೆ ಎಂಬಲ್ಲಿ ನಡೆದಿದೆ.


ಮೃತರನ್ನು ಕೆರ್ವಾಶೆ ಗ್ರಾಮದ ಕಡ್ಪಾಲ್ ವಾಸಿಗಳಾದ ಸೌಮ್ಯ(37) ವರ್ಷ ಹಾಗೂ ಅವರ ಮಗ ಆರೂಷ್(3) ವರ್ಷ ಎಂದು ಗುರುತಿಸಲಾಗಿದೆ.


ಸೌಮ್ಯ ಜುಲೈ 31 ರಂದು ಮಧ್ಯಾಹ್ನ 1.30 ಗಂಟೆಗೆ ಎಂದಿನಂತೆ ಟೈಲರಿಂಗ್ ಕಲಿಯಲೆಂದು ಮನೆಯಿಂದ ಹೊರಟಿದ್ದು, ಈ ಸಂದರ್ಭದಲ್ಲಿ ತನ್ನ ಮಗ 3 ವರ್ಷದ ಆರೂಷ್‌ನನ್ನು ಕರೆದುಕೊಂಡು ಹೋಗಿದ್ದರು. 


ಆದರೆ ಸಂಜೆ 6.30 ಸಮಯವಾದರೂ ಅವರಿಬ್ಬರು ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಗಾಬರಿಗೊಂಡ ಸೌಮ್ಯಳ ತಂಗಿ ಸರಿತಾ ಅವರಿಬ್ಬರನ್ನು ಹುಡುಕುತ್ತಾ ಹೋದಾಗ ಮಡಿವಾಳ ಕಟ್ಟೆಯ ಕೆರೆಯ ನೀರಿನಲ್ಲಿ ಆರೂಷ್ ಧರಿಸಿದ ಚಪ್ಪಲಿ ನೀರಿನಲ್ಲಿ ತೇಲಾಡುತ್ತಿತ್ತು.


ಕೆರೆಯಲ್ಲಿ ಹುಡುಕಾಡಿದಾಗ ಸೌಮ್ಯ ಹಾಗೂ ಆರೂಷ್ ಅವರಿಬ್ಬರ ಮೃತದೇಹ ಪತ್ತೆಯಾಗಿದೆ. ಕೆರೆಯ ಬದಿಯಲ್ಲಿರುವ ದಾರಿ ಮೂಲಕ ಅವರ ಮನೆಯ ಕಡೆಗೆ ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.


 ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم