ಬಂಟ್ವಾಳ: ಕಾರಿಂಜ ದೇವಸ್ಥಾನದ ಹತ್ತಿರ ತಿರುಗಾಡಲು ಆಗಮಿಸಿದ್ದ ಅನ್ಯಕೋಮಿನ ಯುವಕ ಯುವತಿಯರನ್ನು ಹಿಂದೂ ಸಂಘಟನೆ ಸದಸ್ಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಗುರುವಾರ ಸಂಜೆ ನಡೆದಿದೆ.
ಇವರೆಲ್ಲಾ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದ್ದು, ಮೂವರು ಯುವಕರು ಮತ್ತು ಮೂವರು ಯುವತಿಯರು ಪ್ರಕೃತಿ ವೀಕ್ಷಣೆಗೆಂದು ಬಂದಿದ್ದರು ಎಂದು ಹೇಳಲಾಗಿದೆ.
ಯುವಕರು ಕೇರಳ ಮೂಲದವರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಈ ಬಗ್ಗೆ ವಿದ್ಯಾರ್ಥಿಗಳನ್ನು ಪೂಂಜಾಲಕಟ್ಟೆ ಪೋಲೀಸರು ವಿಚಾರಣೆ ನಡೆಸಿದ್ದಾರೆ.
إرسال تعليق