ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇನ್‍ಫೋಸಿಸ್ ವತಿಯಿಂದ ಉಪ್ಪಿನಂಗಡಿ ಗೃಹರಕ್ಷಕ ದಳ ಘಟಕಕ್ಕೆ ಕಂಪ್ಯೂಟರ್

ಇನ್‍ಫೋಸಿಸ್ ವತಿಯಿಂದ ಉಪ್ಪಿನಂಗಡಿ ಗೃಹರಕ್ಷಕ ದಳ ಘಟಕಕ್ಕೆ ಕಂಪ್ಯೂಟರ್

ಗೃಹರಕ್ಷಕ ದಳದ ಎಲ್ಲಾ ಘಟಕಗಳು ಶೀಘ್ರ ಪೇಪರ್‌ಲೆಸ್: ಡಾ|| ಚೂಂತಾರು



ಉಪ್ಪಿನಂಗಡಿ: ಇನ್‍ಫೋಸಿಸ್ ವತಿಯಿಂದ ನೀಡಲಾದ ಕಂಪ್ಯೂಟರನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಪ್ಪಿನಂಗಡಿ ಘಟಕಕ್ಕೆ ಇಂದು (ಆ.31) ಹಸ್ತಾಂತರಿಸಲಾಯಿತು.


ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಇವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಡಾ|| ಮುರಲೀ ಮೋಹನ ಚೂಂತಾರು ಅವರು, ದ.ಕ. ಜಿಲ್ಲೆಯ ಎಲ್ಲಾ 15 ಘಟಕಗಳಿಗೆ ಕಂಪ್ಯೂಟರ್ ನೀಡಲು ರೂಪುರೇಷೆ ತಯಾರಿಸಲಾಗಿದೆ.  ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳು ಕಾಗದ ಮುಕ್ತ ಅಥವಾ ಪೇಪರ್‌ಲೆಸ್ ಆಗಿ ಕಾರ್ಯನಿರ್ವಹಿಸುವಂತೆ  ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಘಟಕದ ಎಲ್ಲಾ ಮಾಹಿತಿಗಳನ್ನು ಕಂಪ್ಯೂಟರೀಕರಣಗೊಳಿಸಿ, ಕೆಲಸ ಸುಲಭವಾಗುವಂತೆ ಮಾಡಲು  ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸುಳ್ಯ, ಸುಬ್ರಹ್ಮಣ್ಯ, ಪುತ್ತೂರು  ಮತ್ತು ಉಪ್ಪಿನಂಗಡಿ ಘಟಕಗಳಿಗೆ ಕಂಪ್ಯೂಟರ್ ಹಂಚಿಕೆ ಮಾಡಲಾಗಿದ್ದು, ಆದಷ್ಟು ಬೇಗ ಗಣಕೀಕರಣ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಅವರು ಜಿಲ್ಲಾ ಕಛೇರಿಯಿಂದ ಕಂಪ್ಯೂಟರ್ ನೀಡಿದ್ದಕ್ಕೆ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಅಧೀಕ್ಷ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್., ಉಪ್ಪಿನಂಗಡಿ ಘಟಕದ ಗೃಹರಕ್ಷಕರಾದ ಸಮದ್, ಜನಾರ್ಧನ್, ನಿಖಿಲ್‍ರಾಜ್, ಸೋಮನಾಥ್, ಮಂಗಳೂರು ಘಟಕದ ಗೃಹರಕ್ಷಕರಾದ ಸುನಿಲ್ ಪೂಜಾರಿ, ಸುನಿಲ್, ಕನಕಪ್ಪ, ದಿವಾಕರ್, ದುಷ್ಯಂತ್, ಶುಭ, ಶಿಲ್ಪಶ್ರೀ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم