ಮಂಗಳೂರು: 'ಚುಟುಕು ರಚನೆ ಕ್ಲಿಷ್ಟವಾದದ್ದು. ಅದರಲ್ಲೂ ಹಾಸ್ಯ ಚುಟುಕು ಬರೆಯುವಾಗ ಪ್ರಾಸ, ಪಂಚುಗಳ ಬಗ್ಗೆ ಎಚ್ಚರವಾಗಿರಬೇಕು. ಕವಿಗಳು ಹಿರಿಯ ಕವಿಗಳ ಸಾಹಿತ್ಯಗಳನ್ನು ಓದಬೇಕು ಆದರೆ ಅವರದೇ ಶೈಲಿಗೆ ಜೋತು ಬೀಳಬಾರದು ಮತ್ತು ಅವರದೇ ಚುಟುಕುಗಳನ್ನು ನಕಲಿ ಮಾಡಬಾರದು' ಎಂದು ಹಿರಿಯ ವ್ಯಂಗ್ಯಚಿತ್ರಕಾರ, ಕವಿ ವೆಂಕಟ ಭಟ್ ಎಡನೀರು ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಶುಕ್ರವಾರ ಖಾಸಗಿ ವಾಹಿನಿ ಮೂಲಕ ಏರ್ಪಡಿಸಿದ್ದ ಆನ್ಲೈನ್ ವೀಡಿಯೋ ಕವಿಗೋಷ್ಠಿ ಸರಣಿಯ 13ನೇ ಕಾರ್ಯಕ್ರಮ 'ಹಾಸ್ಯ ಚುಟುಕು ಸಂಭ್ರಮ' ಹಾಸ್ಯ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, 'ಕೊರೊನಾ ಸಾಂಕ್ರಾಮಿಕದ ಅಟ್ಟಹಾಸದಿಂದ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಸಾಧ್ಯವಾಗಿದೆ. ಆದಷ್ಟು ಬೇಗ ಕೋವಿಡ್ ಮಹಾಮಾರಿಯಿಂದ ನಾಡಿಗೆ ಮುಕ್ತಿ ಸಿಗಲಿ ಮತ್ತು ಎಲ್ಲರೂ ಸಾಂಸ್ಕೃತಿಕವಾಗಿ ಜೊತೆ ಸೇರಿ ಕಾರ್ಯಕ್ರಮಗಳನ್ನು ಮಾಡುವ ದಿನಗಳು ಬರಲಿ.' ಎಂದರು.
ಹಾಸ್ಯ ಚುಟುಕು ಸಂಭ್ರಮದಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪುದುಚೇರಿಯ ವಿವಿಧ ಭಾಗಗಳಿಂದ 49 ಕವಿಗಳು ಭಾಗವಹಿಸಿದ್ದರು.
ಹನುಮಂತ್ ಸಿಂಗ್ ರಜಪೂತ್ ಹಾವೇರಿ, ಅರುಂಧತಿ ರಾವ್ ಮಂಗಳೂರು, ಎಂ.ರಾಮಚಂದ್ರ ರಾವ್ ರಾಯಚೂರು, ವೀಣಾ ಗಣಪತಿ ಹೆಗಡೆ ಉತ್ತರ ಕನ್ನಡ, ಅಶೋಕ ಮಳಗಲಿ ಬೆಳಗಾವಿ, ಮಾನಸ ವಿಜಯ್ ಕೈಂತಜೆ, ಬಂಟ್ವಾಳ ಮೋನಪ್ಪ ಗೌಡ, ಸುಮಂಗಲ ಕೋಳಿವಾಡ, ಡಾ.ನಾರಾಯಣ ಕಾರ್ಯಾಕಟ್ಟೆ, ರೇಖಾ ಸುದೇಶ್ ರಾವ್, ಸರೋಜಾ ಜಯಂತ್ ಏಳಿಂಜೆ, ಸಲೀಂ ಮಾಣಿ, ಡಾ.ಪೂರ್ಣಿಮಾ ಬೆಳ್ತಂಗಡಿ, ದಿವ್ಯಾ ವಿನಯ್ ಮೈಸೂರು, ಎನ್ ಸುಬ್ರಾಯ ಭಟ್ ಮಂಗಳೂರು, ಸುನಿತಾ ಕಾಸರಗೋಡು, ಚೈತ್ರಾ ಶೆಟ್ಟಿ ಮಂಜೇಶ್ವರ, ವಾಸಂತಿ ಅಂಬಲಪಾಡಿ, ಭಾಗ್ಯಶ್ರೀ ಕಂಬಳಕಟ್ಟ, ಶಾರದಾ ಎಸ್ ಅಂಚನ್ ಮುಂಬೈ, ಗಣೇಶ್ ಪ್ರಸಾದ್ ಜಿ. (ಜೀಜಿ)ನೆಲ್ಲಿಕಾರು, ಶಶಿಕಲಾ ಭಾಸ್ಕರ್ ದೈಲಾ, ಮಹಾಲಕ್ಷ್ಮೀ ಶಾನುಬಾಗ್, ಶಿರಾಲಿ, ವಿಜಯ ಕಾನ ಪೆರ್ಲ, ಅಚ್ಚುತ ರಾವ್ ಚಿಕ್ಕಮಗಳೂರು, ಹಂಸರಾಗ ಶೆಟ್ಟಿ ಪುತ್ತೂರು, ಮಂಜುಳಾ ಬಿ.ಕೆ ತುಮಕೂರು, ಬದ್ರುದ್ದೀನ್ ಕೂಳೂರು, ಹಮೀದಾ ಬೇಗಂ ದೇಸಾಯಿ, ಎಂ.ಕೃಷ್ಣ ಬರ್ವೆ, ಚಂದನಾ ಕೆ.ಎಸ್ ಮಂಗಳೂರು, ಹಿತೇಶ್ ಕುಮಾರ್ ನೀರ್ಚಾಲು, ವ.ಉಮೇಶ್ ಕಾರಂತ್ ಉಡುಪಿ,ದೀಪಾಲಿ ಸಾಮಂತ್ ದಾಂಡೇಲಿ, ಮುದ್ದು ಮೂಡುಬೆಳ್ಳೆ ಮಂಗಳೂರು, ಮಾನಸ ಪ್ರವೀಣ್ ಭಟ್ ಮೂಡಬಿದ್ರೆ, ರಶ್ಮಿ ಸನಿಲ್ ಮಂಗಳೂರು, ರಾಧಾಶ್ಯಾಮ ರಾವ್ ಧಾರವಾಡ, ವಿಘ್ನೇಶ್ ಭಿಡೆ ಕದ್ರಿ, ರೇಖಾ ನಾರಾಯಣ್ ಪಕ್ಷಿಕೆರೆ, ಸುಧಾ ಎನ್ ತೇಲ್ಕರ್ ಅನಂತಪುರ, ರೇಮಂಡ್ ಡಿಕುನ್ಹಾ ತಾಕೊಡೆ, ರೋಹಿತ್ ಕುಮಾರ್ ಗೋರಿಗುಡ್ಡೆ, ಪತ್ತಂಗಿ ಎಸ್.ಮುರಳಿ ಬೆಂಗಳೂರು, ವಿಜೇಶ್ ದೇವಾಡಿಗ, ವಾಣಿ ಲೋಕಯ್ಯ, ಡಾ.ಸುರೇಶ್ ನೆಗಳಗುಳಿ, ಅಬ್ದುಲ್ ಸಮದ್ ಬಾವ, ಲತೀಶ್ ಎಂ. ಸಂಕೊಳಿಗೆ ಇವರು ತಮ್ಮ ಹಾಸ್ಯ ಚುಟುಕುಗಳನ್ನು ವೀಡಿಯೋ ವಾಚನ ಮಾಡಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment