ಉಪ್ಪಿನಂಗಡಿ: ಸ್ಥಳೀಯ ಇಂದ್ರಪ್ರಸ್ಥ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿನಿಯರಾದ ಯು. ಅಮೃತಾ ದೇವಿ ಮತ್ತು ಶ್ರೇಯಾ ರಾವ್ ಅವರು ರಚಿಸಿದ ' ಆಟೋಮೇಟೆಡ್ ರೀಚಾರ್ಜೆಬಲ್ ಫಾರ್ಮರ್ ಫ್ರೆಂಡ್ಲಿ ಸಿಕ್ಲ್' ವಿಜ್ಞಾನದ ಮಾದರಿಯು ರಾಷ್ಟ್ರಮಟ್ಟದ ಎನ್‌ಸಿಎಸ್‌ಸಿ (National Children's Science Congress- ರಾಷ್ಟ್ರೀಯ ಮಕ್ಕಳ ವಿಜ್ಞಾನ ಪರಿಷತ್ತು) ಗೆ ಆಯ್ಕೆಯಾಗಿದೆ.
ಯು. ಅಮೃತಾ ದೇವಿ ಬಿಳಿಯೂರು ಯು. ಈಶ್ವರ ಭಟ್ ಮತ್ತು ಯು. ಗೀತಾಲಕ್ಷ್ಮಿ ದಂಪತಿಗಳ ಪುತ್ರಿ. ಈಕೆ 2020ನೇ ಸಾಲಿನ ಬಾಲವಿಜ್ಞಾನಿ ಪುರಸ್ಕಾರಕ್ಕೂ ಪಾತ್ರಳಾಗಿದ್ದಾಳೆ. ಶ್ರೇಯಾ ರಾವ್ ಬಿಳಿಯೂರು ಬಿ. ಸೂರ್ಯಕುಮಾರ್ ಮತ್ತು ವೀಣಾ ದಂಪತಿಯ ಪುತ್ರಿ.
ಈ ಯೋಜನೆಗೆ ಸಂಸ್ಥೆಯ ಸಹಶಿಕ್ಷಕಿ ಕ್ರಿಸ್ಟಲ್ ಜ್ಯೋತಿಪ್ರಿಯಾ ಡಿಸೋಜ ಇವರು ಮಾರ್ಗದರ್ಶನ ನೀಡಿದ್ದಾರೆ.
Post a Comment