ಬೆಂಗಳೂರು; ನಟಿ ಸಂಜನಾ ಗಲ್ರಾನಿ ಡ್ರಗ್ ಸೇವನೆ ದೃಢ ಎಂದು ವರದಿ ಬರುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಸಂಜನಾ ಅವರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ತಾಯಿ ರೇಷ್ಮಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ
ಸಂಜನಾಗೆ ಸರ್ಜರಿ ಆಗಿದೆ. ಹೀಗಾಗಿ ಅವರು ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಕೆ ಮಾನಸಿಕವಾಗಿ ಕುಗ್ಗಿದ್ದಾಳೆ. ನಾವು ದೇವರನ್ನು ನಂಬಿದ್ದೇವೆ. ನನ್ನ ಮಗಳು ಯಾವುದೇ ತಪ್ಪನ್ನೂ ಮಾಡಿಲ್ಲ. ಆದರೆ ದುರಾದೃಷ್ಟದಿಂದ ಈ ರೀತಿಯೆಲ್ಲ ಆಗುತ್ತಿದೆ. ಆಕೆಗಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಆಕೆಯನ್ನು ಎಲ್ಲರೂ ಬೆಂಬಲಿಸಿ ಎಂದು ರೇಷ್ಮಾ ಹೇಳಿದ್ದಾರೆ.
2020ರ ಸೆಪ್ಟೆಂಬರ್ ತಿಂಗಳಲ್ಲಿ ಮಾದಕ ದ್ರವ್ಯ ಮಾರಾಟ ಹಾಗೂ ಸೇವನೆ ಪ್ರಕರಣದ ಅಡಿಯಲ್ಲಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವಿರೇನ್ ಖನ್ನಾ, ರವಿಶಂಕರ್ ಸೇರಿದಂತೆ ಒಟ್ಟು 16 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಇವರೆಲ್ಲ ಮಾದಕ ದ್ರವ್ಯ ಸೇವನೆ ಮಾಡಿದ್ದಾರೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ತಲೆಗೂದಲನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ಈ ವರದಿಯಲ್ಲಿ ಸಂಜನಾ, ರಾಗಿಣಿ ಸೇರಿದಂತೆ 12 ಮಂದಿ ಆರೋಪಿಗಳು ಡ್ರಗ್ ಸೇವನೆ ಮಾಡಿರುವುದು ದೃಢವಾಗಿದೆ. ಇನ್ನೂ ನಾಲ್ಕು ಮಂದಿಯ ವರದಿ ಬರಬೇಕಿದೆ.
Post a Comment