ಹಾಸನ: ಟಿಪ್ಪರ್ ಲಾರಿ ಹರಿದು ವೃದ್ಧ ಸಾವನ್ನಪಿರುವ ಘಟನೆಯೊಂದು ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಶಂಭುನಾಥಪುರದ ದೊರೆಸ್ವಾಮಿ 70 ವರ್ಷದ ಮೃತ ವೃದ್ಧ.
ದೊರೆಸ್ವಾಮಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಯ ಹತ್ತಿರದಿಂದ ನಡೆದುಕೊಂಡು ಹೋಗುತ್ತಿದ್ದರು.
ವೃದ್ಧನನ್ನು ಗಮನಿಸದ ಲಾರಿ ಚಾಲಕ ಏಕಾಏಕಿ ಟಿಪ್ಪರ್ ಚಲಾಯಿಸಿದ್ದು, ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾರೆ.
ಘಟನೆ ನಡೆದ ಸಂಧರ್ಭದಲ್ಲಿ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment