ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೀನುಗಾರಿಕೆ ಗೆ ತೆರಳಿದ ಯಕ್ಷಗಾನ ಕಲಾವಿದ ನೀರುಪಾಲು

ಮೀನುಗಾರಿಕೆ ಗೆ ತೆರಳಿದ ಯಕ್ಷಗಾನ ಕಲಾವಿದ ನೀರುಪಾಲು



ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಯುವ ಯಕ್ಷಗಾನ ಕಲಾವಿದ ಕಂದವಳ್ಳಿ ಗೋಪಾಲ ಗೌಡ (32) ವರ್ಷ ಆ.14ರಂದು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದು, ಇದೀಗ ಮಂಗಳವಾರದಂದು ಅವರ ಮೃತದೇಹ ಕುಮಟಾ ಹೆಡ್ ಬಂದರ್ ಬೀಚ್ ಬಳಿ ಪತ್ತೆಯಾಗಿದೆ.


ಗೋಪಾಲ ಗೌಡ ಅವರು ಕಂದವಳ್ಳಿ ಕಲ್ಲಡ್ಡೆಯ ಮಾದೇವ ಗೌಡ ಎಂಬವರ ಪುತ್ರನಾಗಿದ್ದು, ಮಂಜನಾಥ ಎಂಬವರ ಬೋಟಿನಲ್ಲಿ ಮೀನುಗಾರಿಕೆಗಾಗಿ ತೆರಳಿದ್ದಾಗ ಆ.14ರ ರಾತ್ರಿ 7.30ರ ಸಮಾರಿಗೆ ಆಕಸ್ಮಿಕವಾಗಿ ಬೋಟಿನಿಂದ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು, ನಾಪತ್ತೆಯಾಗಿದ್ದರು.


ಅವರ ಮೃತದೇಹ ಇದೀಗ ಪತ್ತೆಯಾಗಿದೆ. ಇವರು ತಂದೆ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


0 تعليقات

إرسال تعليق

Post a Comment (0)

أحدث أقدم