ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಗಸ್ಟ್ 15: 'ಯಕ್ಷ-ಕಾವ್ಯ-ಭಾರತ' ಪ್ರಸಾರ

ಆಗಸ್ಟ್ 15: 'ಯಕ್ಷ-ಕಾವ್ಯ-ಭಾರತ' ಪ್ರಸಾರ


ಮಂಗಳೂರು: ಪುತ್ತೂರು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಶೇಷ ಯಕ್ಷಗಾನ ಸಾಂಗತ್ಯದ ಕವಿಗೋಷ್ಠಿ ಕಾರ್ಯಕ್ರಮ ಯಕ್ಷ-ಕಾವ್ಯ-ಭಾರತದ ಚಿತ್ರೀಕರಣ ಇತ್ತೀಚೆಗೆ ನಡೆಯಿತು.


ಪುತ್ತೂರು ಸಾಹಿತ್ಯ ವೇದಿಕೆ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಕಾ.ವೀ.ಕೃಷ್ಣದಾಸ್, ಶಶಿಕಲಾ ಭಾಸ್ಕರ್ ದೈಲಾ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಹಾಗೂ ವಿಜೇಶ್ ದೇವಾಡಿಗ ಮಂಗಳಾದೇವಿ ಅವರು ಕವಿಗಳಾಗಿ ಭಾಗವಹಿಸಿ ಕಾವ್ಯವಾಚನ ಮಾಡಿದರು.


ಜನಮನ್ನಣೆಯ ಯಕ್ಷಗಾನ ಭಾಗವತರಾದ ಧೀರಜ್ ರೈ ಸಂಪಾಜೆ ಕವಿಗಳು ವಾಚಿಸಿದ ಸಾಹಿತ್ಯವನ್ನು ಯಕ್ಷಗಾನ ರೂಪದಲ್ಲಿ ಹಾಡಿ ರಂಜಿಸಿದರು. ಮದ್ದಳೆಯಲ್ಲಿ ಅಕ್ಷಯ್ ರಾವ್ ವಿಟ್ಲ ಸಹಕರಿಸಿದರು. ದೀವಿತ್ ಪೆರಾಡಿ ಕಾರ್ಯಕ್ರಮದ ಆಯೋಜನೆಯಲ್ಲಿ ನೆರವಾದರು. ಡಾ.ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.


ಈ ವಿಶೇಷ ಕಾರ್ಯಕ್ರಮವು ಆಗಸ್ಟ್ 15ರಂದು ಸಂಜೆ 6ರಿಂದ ನಮ್ಮ ಕುಡ್ಲ ವಾಹಿನಿಯಲ್ಲಿ ಭಾರತಾಮೃತ ರಾಷ್ಟ್ರ ವಂದನ ಕಾರ್ಯಕ್ರಮದ ಭಾಗವಾಗಿ ಪ್ರಸಾರವಾಗಲಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post