ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಬಳಸಿದ ಭಾಷೆ ಸರಿಯಲ್ಲ

ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಬಳಸಿದ ಭಾಷೆ ಸರಿಯಲ್ಲ



ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಸಾಹೇಬ್ರು ಮಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣ ಸಭೆಯಲ್ಲಿ ಹಿರಿಯ ಅಧಿಕಾರಿಗಳನ್ನು ನಡೆಸಿಕೊಂಡ ರೀತಿ ಮತ್ತು ಬಳಸಿದ ಪದ ನನಗೇನೊ ಅಷ್ಟು  ಚೆನ್ನಾಗಿ ಕಾಣಲಿಲ್ಲ. ಹೌದು ಸರಕಾರಿ ಹಿರಿಯ ಅಧಿಕಾರಿಗಳು ಏನೇೂ ತಪ್ಪು ಮಾಡಿದ್ದಾರೆ ಸರಿ. ಆದರೆ ಆ ತಪ್ಪನ್ನು ಗುರುತಿಸಿ ಚೆನ್ನಾಗಿನ ಭಾಷೆಯಲ್ಲಿ  ಹೇಳ ಬಹುದಿತ್ತು. ಅವರೆಲ್ಲರೂ ತುಂಬಾ ವಿದ್ಯಾವಂತರೇ, ಶುದ್ಧ ಭಾಷೆಯಲ್ಲಿ ಹೇಳಿದ್ದರೆ ಅಥ೯ಮಾಡಿ ಕೊಳ್ಳಬಲ್ಲ ಅಧಿಕಾರಿಗಳೇ. ಒಬ್ಬರು ಐಎಎಸ್ ಇನ್ನೊಬ್ಬರು ಹಿರಿಯ ಡಾಕ್ಟರ್. ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳು ಜನ ಪ್ರತಿನಿಧಿಗಳ ಪತ್ರಕತ೯ರ ಸಾರ್ವಜನಿಕ ಎದುರಿನಲ್ಲಿಯೇ "ನಾಡ ದೊರೆ ಅನ್ನಿಸಿಕೊಂಡವರು ಅಧಿಕಾರಿಗಳನ್ನು ನಿಲ್ಲಿಸಿ  ಏಕವಚನದಲ್ಲಿ ಗದರಿಸುವುದು. ಕಾಮನ್ ಸೆನ್ಸ್. ಇಲ್ಲವೆ ಅನ್ನುವ ಧಾಟಿಯಲ್ಲಿ ಭಾಷೆ  ಬಳಸಿರುವುದು ನನಗೇನೂ ಹಿಡಿಸಲಿಲ್ಲ.


ಹಾಗಂತ ಅವರು ಅಧಿಕಾರಿಗಳನ್ನು ಎಚ್ಚರಿಸಿದ್ದು ತಪ್ಪಲ್ಲ. ಪದ ಬಳಕೆ ಬಗ್ಗೆ ನನಗೆ ಸ್ವಲ್ಪ ಬೇಸರವಾಗಿದೆ. ನಾನು ಬೊಮ್ಮಾಯಿ ಅಂತಹ ಸುಶಿಕ್ಷಿತ ರಾಜಕಾರಣಿಗಳಿಂದ ನಿರೀಕ್ಷೆ ಮಾಡಿರಲಿಲ್ಲ. ಹಾಗಾದರೆ ಅವರು ಅದೇ ರೀತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನೆ ಮಾಡಬಹುದಿತ್ತಲ್ಲಾ? ಹಾಗಾಗಿಯೇ ಏನೇೂ ಇಂದು ಇಂತಹ ಅದೆಷ್ಟೊ ದಕ್ಷ ಅಧಿಕಾರಿಗಳು ಸ್ವಲ್ಪ ಸಮಯ ಕೆಲಸ ಮಾಡಿ ರಾಜಕೀಯದ ಕಡೆಗೆ ಮುಖ ಮಾಡುವುದು. ಮಾತ್ರವಲ್ಲ ಇಂದು ಅದೆಷ್ಟೊ ಕರಾವಳಿಯ ಪ್ರತಿಭಾವಂತ ವಿದ್ಯಾರ್ಥಿಗಳು ಆಡಳಿತಾತ್ಮಕ ಹುದ್ದೆಗಳಿಗೆ ಹೇೂಗಲು ಹಿಂಜರಿಯುವುದು ಇದೇ ಕಾರಣಕ್ಕೆ. ನನ್ನ ಹತ್ತಿರವೇ ಅದೆಷ್ಟೊ ವಿದ್ಯಾರ್ಥಿಗಳು ಹೇಳಿದುಂಟು. ಸರ್ ನಮ್ಮ ರಾಜಕಾರಣಿಗಳು ಬಳಸುವ ಭಾಷೆ, ಹಾಗಾಗಿ ಜೊತೆ ಕಾಲ ಕಳೆಯುವುದು ತುಂಬಾ ಕಷ್ಟ ಸರ್. ನಾವು ಇಂಜಿನಿಯರ್ ಡಾಕ್ಟರ್ ಆಗಿಯೇ ಇರುತ್ತೇವೆ. ಅದು ಕಡಿಮೆ ಆದರೆ ಅಮೆರಿಕಾಗೊ ಇಂಗ್ಲೆಂಡ್ ಗೊ ಹೇೂಗುತ್ತೇವೆ. ಅಂತೂ ನಿಮ್ಮ ಐಎಎಸ್, ಕೆಎಎಸ್ ಬೇಡ ಸಾರ್.!


ಉತ್ತಮ ನಾಯಕತ್ವ ಅಂದರೆ ಬಳಸುವ ಭಾಷೆಯ ಮೇಲು ಹಿಡಿತ ಬೇಕು. ಏನಂತೀರಿ?


-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post