ಹುಮನಾಬಾದ: ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾದ ಘಟನೆಯೊಂದು ಚಿಟಗುಪ್ಪ ತಾಲೂಕಿನ ಬೇಮಳಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಮಹಿಳೆಯ ಗುರುತು ಪತ್ತೆಯಾಗಿಲ್ಲ. ಆದರೆ ಸುಮಾರು 22 ರಿಂದ 24 ವರ್ಷದ ಮಹಿಳೆ ಎಂದು ಪತ್ತೆ ಹಚ್ಚಲಾಗಿದೆ.
ಕೊರಳಿನಲ್ಲಿ ತಾಳಿ, ಕಾಲಿನಲ್ಲಿ ಕಾಲು ಉಂಗರ ಇದ್ದು, ಬೇರೆ ಕಡೆ ಕೊಲೆಮಾಡಿ ಇಲ್ಲಿ ತಂದು ಸುಡುವ ಪ್ರಯತ್ನ ನಡೆದಿರಬೇಕು ಎಂದು ಪೊಲೀಸರು ಊಹಿಸಿದ್ದಾರೆ.
ದೇವಗಿರಿ ತಾಂಡ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಘಟನೆ ಕುರಿತು ಬೇಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಿದ್ದಾರೆ.
إرسال تعليق