ಉಜಿರೆ: ಮಧ್ಯಯುಗದ ಕಾವ್ಯ ಪರಂಪರೆ ಭಾರತೀಯ ಸಾಮಾಜಿಕ ಜೀವನಕ್ಕೆ ಚೇತನ ತುಂಬಿದೆ. ಕಬೀರದಾಸರು, ಸೂರದಾಸರು, ತುಲಸಿದಾಸರು, ಬಿಹಾರಿಲಾಲರು ರಹೀಮರಾದಿಯಾಗಿ ತಮ್ಮ ತತ್ವಪದಗಳೊಂದಿಗೆ ಅಸಂಘಟಿತ ಗೊಂದಲ ಹಾಗೂ ಅಸುರಕ್ಷಿತ ಸಮಾಜವನ್ನು ಬೆಸೆಯುವ ಕಾರ್ಯವನ್ನು ಮಾಡಿದ್ದಾರೆ. ಭಕ್ತಿಪಂಥದ ಪದಗಳು ಸದಾ ಕಾಲ ಸಮಾಜಕ್ಕೆ ದಿಗ್ದರ್ಶನ ನೀಡುತ್ತವೆ ಎಂದು ದಕ್ಷಿಣ ಭಾರತ ಸ್ನಾತಕೋತ್ತರ ಕೇಂದ್ರ ಹಿಂದಿ ಪ್ರಚಾರ ಸಭಾದ ಪ್ರಾಧ್ಯಾಪಕ ಡಾ. ಮಂಜುನಾಥ ಅಂಬಿಗ ತಿಳಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ ಹಿಂದಿ ವಿಭಾಗ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಡಾ. ವಿಜಯಕುಮಾರ ಶೆಟ್ಟಿ ಡೀನ್ ಮಾರ್ಗದರ್ಶನ ನೀಡಿದರು. ಡಾ.ಮಲ್ಲಿಕಾರ್ಜುನ ನಿರೂಪಿಸಿದರು. ಶ್ರೀಮತಿ ಶೃತಿ ಮಂಕೀಕರ ವಂದಿಸಿದರು. ಡಾ.ಗಣರಾಜ ಭಟ್, ಪ್ರೊ. ಅಭಿನಂದನ್ ಜೈನ್, ಡಾ.ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق