ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಬರಿ ವಿ.ಶೆಟ್ಟಿ ಅವರು ಮಂಡಿಸಿದ "ಅನಾಲಿಸಿಸ್ ಆಫ್ ಎಗ್ರಿಕಲ್ಚರಲ್ ಡಿಸೀಜ್ಡ್ ಡೇಟಾ ಯೂಸಿಂಗ್ ಮಷೀನ್ ಲನಿ೯ಂಗ್ ಟೆಕ್ನಿಕ್ಸ್" ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
ತುಮಕೂರಿನ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗು ಮುಖ್ಯಸ್ಥ ಡಾ. ಎಂ. ಸಿದ್ದಪ್ಪ ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ಪ್ರಾಧ್ಯಾಪಕ ಹಾಗು ಮುಖ್ಯಸ್ಥ ಡಾ. ಸುರೇಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಶಬರಿ ವಿ.ಶೆಟ್ಟಿಯವರು ಈ ಮಹಾಪ್ರಬಂಧವನ್ನು ಮಂಡಿಸಿದ್ದರು.
ಶಬರಿ ವಿ.ಶೆಟ್ಟಿಯವರು ನಿವೃತ್ತ ಮುಖ್ಯೋಪಾಧ್ಯಾಯ ಜನ್ಮನೆ ಚಂದ್ರ ಶೆಟ್ಟಿ ಮತ್ತು ಬಿಲ್ಲಾಡಿ ಮನೆ ಶಾಂತ ಸಿ. ಶೆಟ್ಟಿಯವರ ಪುತ್ರಿ ಹಾಗು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೊಳಹಳ್ಳಿ ಡಾ. ವಿದ್ಯಾಸಾಗರ ಶೆಟ್ಟಿಯವರ ಪತ್ನಿ.
إرسال تعليق