ಕುಂದಾಪುರ : ಕೂಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರು ಆಕಸ್ಮಿಕವಾಗಿ ಹೊಳೆಗೆ ಬಿದ್ದ ಪರಿಣಾಮ ಸಾವನಪ್ಪಿರುವ ಘಟನೆಯೊಂದು ಆರ್ಡಿ ಕೊಂಜಾಡಿ ಗಂಟುಬೀಳು ಚಕ್ಕರ್ಮಕ್ಕಿ ಸಮೀಪ ನಡೆದಿದೆ.
ಮೃತರನ್ನು ಮೋಹನ ನಾಯ್ಕ (21), ವರ್ಷ ಸುರೇಶ (19)ವರ್ಷ ಎಂದು ಗುರುತಿಸಲಾಗಿದ್ದು.ಇಬ್ಬರೂ ಹತ್ತಿರದ ಸಂಬಂಧಿಗಳಾಗಿದ್ದು, ಕೊಂಜಾಡಿ ಗಂಟುಬೀಳು ಪರಿಸರಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ಹೋಗಿದ್ದರು.
ತಡವಾದರೂ ಮನೆಗೆ ಬಾರದಿರುವ ಕಾರಣ ಮನೆಯವರು ಹೊಳೆ ಸಮೀಪ ಹುಡುಕಿದಾಗ ಇಬ್ಬರ ಬಟ್ಟೆ ಹಾಗೂ ಚಪ್ಪಲಿ ಕಾಣಸಿಕ್ಕಿದೆ. ಮಧ್ಯಾಹ್ನ ಊಟದ ಬಳಿಕ ಸಮೀಪದಲ್ಲಿ ಹರಿಯುತ್ತಿದ್ದ ಕುಂಟುಹೊಳೆ ಕುಪ್ಪರಿಗೆಗುಂಡಿ ಎಂಬಲ್ಲಿ ಸ್ನಾನಕ್ಕೆ ನೀರಿಗಿಳಿದಿದ್ದರು ಎನ್ನಲಾಗಿದೆ.
ಈಜಲು ಬಾರದೇ ಆಕಸ್ಮಿಕವಾಗಿ ಆಳವಾದ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿದೆ. ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ನೀರಿನಲ್ಲಿ ಶವ ಪತ್ತೆಯಾಗಿದೆ. ಇಬ್ಬರ ಬಾಯಿ ಭಾಗಕ್ಕೆ ನೀರಿನೊಳಗೆ ಕಲ್ಲು ತಾಗಿದ ಪರಿಣಾಮ ಗಾಯವಾಗಿದೆ.
ಶಂಕರನಾರಾಯಣ ಎಸ್‌ಐ ಶ್ರೀಧರ ನಾಯ್ಕ ಹಾಗೂ ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق