ರಾಮನಗರ: ನಗರದ ಮಾಗಡಿ ರಸ್ತೆಯ ರಾಯರದೊಡ್ಡಿ ಬಳಿ ಶನಿವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದರು.
ರಾಯರದೊಡ್ಡಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಬಳಿ ಅಪಘಾತ ನಡೆದಿದ್ದು, ರಾಮನಗರ ಬಾಲಗೇರಿಯ ಸಹೋದರರಾದ ಮೂರ್ತಿ (23), ವರ್ಷ ವೆಂಕಟೇಶ್ (33) ವರ್ಷ ಹಾಗೂ ಅಚ್ಚಲುದೊಡ್ಡಿ ನಿವಾಸಿ ರಘು (19) ವರ್ಷ ಮೃತಪಟ್ಟವರು.
ಎರಡು ಪಲ್ಸರ್ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ 3 ಮಂದಿ ಸಾವನ್ನಪ್ಪಿದರು.
ಮೃತ ಯುವಕರ ಶವವನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق