ಕಲಬುರಗಿ: ಪೋಷಕರಿಂದ ಆನ್ ಲೈನ್ ಕ್ಲಾಸ್ಗೆ ತೊಂದರೆ ಆಯ್ತು ಅಂತ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
17 ವರ್ಷದ ಗುರುಚರಣ್ ಉಡುಪ ಆತ್ಮಹತ್ಯೆ ಮಾಡಿಕೊಂಡ ಯುವಕ.
ಗುರುಚರಣ್ ಉಡುಪಿಯ ಪ್ರತಿಷ್ಠಿತ ಕಾಲೇಜ್ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು. ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಎರಡು ದಿನದ ಹಿಂದೆ ಆನ್ಲೈನ್ ಕ್ಲಾಸ್ನಲ್ಲಿದ್ದಾಗ ಅವರ ತಂದೆ ತಾಯಿ ಡಿಸ್ಟರ್ಬ್ ಮಾಡಿದ್ದಾರಂತೆ. ಈ ವೇಳೆ ಡಿಸ್ಟರ್ಬ್ ಮಾಡಬೇಡ ಅಮ್ಮಾ ಎಂದು ಹೇಳಿದ್ದಾನೆ ಎನ್ನಲಾಗಿದೆ. ನಂತರ ನೊಂದು ರೂಮಿನೊಳಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಈ ಪ್ರಕರಣ ಬಗ್ಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ತನಿಖೆ ಬಳಿಕ ಆತ್ಮಹತ್ಯೆಯ ಸತ್ಯಾಸತ್ಯತೆ ಬಯಲಾಗಲಿದೆ.
Post a Comment