ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್ ಬಳಿ ಭಾನುವಾರ ರಾತ್ರಿ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದ್ದ ಕಾರಿನ ನಾಲ್ಕೂ ಚಕ್ರಗಳು ಹಾಗೂ ಕಾರಿನಲ್ಲಿದ್ದ ಟೂಲ್ಸ್‌ಗಳನ್ನು ಕಳವು ಮಾಡಿರುವ ಘಟನೆಯೊಂದು ನಡೆದಿದೆ.
ಪಟ್ಟಣದ ಕುಡುಗರಹಳ್ಳಿ ಬಡಾವಣೆ ನಿವಾಸಿ ಮನೋಜ್ ಎಂಬುವವರು ಭಾನುವಾರ ರಾತ್ರಿ ದೋಣಿಗಾಲ್ ಕಡೆಯಿಂದ ಪಟ್ಟಣಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ.
ರಸ್ತೆಯಿಂದ ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಕಾರು ಉರುಳಿ ಬಿದ್ದಿದೆ . ಕಾರಿನ ಹಿಂಭಾಗ ಬರುತ್ತಿದ್ದ ಆನೇಮಹಲ್ ಕಾಫಿ ಬಡ್ಡೆ ಮೋಣು ಎಂಬುವವರು ಹಾಗೂ ಅವರ ಸ್ನೇಹಿತರು ಗಾಯಗೊಂಡಿದ್ದು. ಮನೋಜ್ ಅವರನ್ನು ಮೇಲೆ ಎತ್ತಿಕೊಂಡು ಬಂದು ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.
ಹೊಂಡದಲ್ಲಿ ಬಿದ್ದಿದ್ದ ಕಾರನ್ನು ಮೇಲೆತ್ತಲು ಬೆಳಿಗ್ಗಿನ ಜಾವ ತೆರಳಿದಾಗ ಕಳ್ಳರು ಕಾರಿನ ನಾಲ್ಕೂ ಚಕ್ರಗಳನ್ನು ಹಾಗೂ ಕಾರಿನಲ್ಲಿದ್ದ ಜಾಕ್ ಹಾಗೂ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment