ವಿಜಯಪುರ: ಪತ್ನಿಯ ನಡತೆ ಬಗ್ಗೆ ಮೇಲೆ ವಿಪರೀತ ಅನುಮಾನ ಹೊಂದಿದ್ದ ವ್ಯಕ್ತಿಯೊಬ್ಬ, ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ನಗರದ ಹೊರ ವಲಯದಲ್ಲಿ ಇರುವ ತೊರವಿ ಗ್ರಾಮದ ಸಂತೋಷ ಈಟಿ ಎಂಬಾತನೇ ಪತ್ನಿ ಶ್ರೀದೇವಿ ಈಟಿ ಎಂಬಾಕೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಆರೋಪಿ.
ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ, ಖಾಸಗಿ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದು, ಈತ ಹೆಂಡತಿ ನಡತೆ ಬಗ್ಗೆ ಸಂಶಯ ಹೊಂದಿದ್ದ. ಮೂರು ಮಕ್ಕಳಿದ್ದರೂ ಪತಿ ತನ್ನ ಮೇಲೆ ಸಂಶಯಿಸುತ್ತಿದ್ದ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಕಲಹ ನಡೆಯುತ್ತಲೇ ಇತ್ತು. ಈ ಬಗ್ಗೆ ಹಲವು ಬಾರಿ ಹಿರಿಯರು ರಾಜಿ ಪಂಚಾಯತಿ ನಡೆಸಿದ್ದರು.
ಕೊನೆಗೆ ಮೂರು ಮಕ್ಕಳನ್ನು ತೊರವಿ ಗ್ರಾಮದಲ್ಲೇ ಇರುವ ಪತ್ನಿಯ ತವರು ಮನೆಗೆ ಕಳಿಸಿದ್ದ ಸಂತೋಷ, ಶ್ರೀದೇವಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶ್ರೀ ದೇವಿ ಸಹೋದರಿ ರೋಹಿಣಿ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸಿದಿದ್ದಾಗ ಆತಂಕಗೊಂಡು ಅಕ್ಕನ ಮನೆಗೆ ಹೋಗಿ ನೋಡಿದಾಗ ದುರಂತ ಬಯಲಾಗಿದೆ. ಈ ಬಗ್ಗೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق