ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೂಸೈಡ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ

ಸೂಸೈಡ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ

 


ಬೆಂಗಳೂರು: ಸೂಸೈಡ್​ ನೋಟ್​ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆಯಾಗಿರುವ ಘಟನೆಯೊಂದು ಬಾಗಲಗುಂಟೆಯಲ್ಲಿ ನಡೆದಿದೆ. 


ಗಾಂಧಿ, ಶಾಲಿನಿ, ಭನುಶ್ರೀ, ಹೇಮಶ್ರೀ ನಾಪತ್ತೆಯಾದ ಕುಟುಂಬದ ಸದಸ್ಯರು. ಈ ಕುಟುಂಬದ ಚಿರಂಜೀವಿ ಎಂಬಾತ ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.


ಚಿರಂಜೀವಿ ಪ್ರತಿನಿತ್ಯ ಸಹೋದರಿ ಮತ್ತು ಪೋಷಕರ ಜೊತೆ ಮಾತನಾಡುತ್ತಿದ್ದ, ಆಗಸ್ಟ್​ 12ರಂದು ಕರೆ ಮಾಡಿದಾಗ ಎಲ್ಲರ ಫೋನ್​ ಸ್ವಿಚ್​ ಆಫ್​ ಆಗಿದ್ದು, ಇದರಿಂದ ಗಾಬರಿಗೊಂಡ ಚಿರಂಜೀವಿ, ಪೋಷಕರ ಮನೆ ಬಳಿಯಿದ್ದ ಸ್ನೇಹಿತನಿಗೆ ಮಾಹಿತಿ ತಿಳಿಸಿದ್ದಾನೆ.


 ಆತನ ಸ್ನೇಹಿತ ಮನೆ ಬಳಿ ಹೋದಾಗ ಬೀಗ ಹಾಕಿದ್ದರು. ಮನೆ ಮಾಲೀಕರನ್ನು ವಿಚಾರಿಸಿದಾಗ, ಅವರು ಕುಟುಂಬ ಸಮೇತ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ. ಕೂಡಲೇ ಆತ ಈ ಮಾಹಿತಿಯನ್ನು ಚಿರಂಜೀವಿಗೆ ತಿಳಿಸಿದ್ದಾನೆ.


ಇದರಿಂದ ಗಾಬರಿಗೊಂಡ ಚಿರಂಜೀವಿ ಬೆಂಗಳೂರಿಗೆ ಬಂದು, ತನ್ನ ಬಳಿಯಿದ್ದ ನಕಲಿ ಕೀ ಬಳಸಿ ಮನೆಯ ಬಾಗಿಲು ತೆರೆದಾಗ ಕಿಟಕಿ ಬಳಿ ಡೆತ್​ ನೋಟ್ ಪತ್ತೆಯಾಗಿದೆ.  


ಅದರಲ್ಲಿ 'ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನಮಗೆ ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ ಸಾಯಲು ಬಿಡಿ' ಎಂದು ಕುಟುಂಬ ಸದಸ್ಯರು ಬರೆದಿದ್ದರು. 


ಕೂಡಲೇ ಚಿರಂಜೀವಿ ಈ ಮಾಹಿತಿಯನ್ನು ಬಗಲಗುಂಟೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. 


ಇದೀಗ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು, ಕುಟುಂಬ ಸದಸ್ಯರಿಗಾಗಿ ಶೋಧ ನಡೆಸುತ್ತಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post