ಸುಳ್ಯ: ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿಯೂ ಮೃತಪಟ್ಟ ಘಟನೆಯೊಂದು ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ.
ಕೆಮ್ರಾಜೆ ಗ್ರಾಮದ ಮಾಪಲಕಜೆಯ ಸಂಗೀತಾ ಮತ್ತು ಅವರ ಮಗು ಮೃತಪಟ್ಟವರು.
ತೋಟದಲ್ಲಿನ ಕೆರೆಯ ಬಳಿ ಮಗು ಕಾಲು ಜಾರಿ ಬಿದ್ದಾಗ ರಕ್ಷಿಸಲು ಸಂಗೀತಾ ಅವರು ಕೂಡ ಕೆರೆಗೆ ಹಾರಿದ್ದಾರೆ. ಆದರೆ, ಈಜು ಬಾರದ ಅವರು ಮಗುವಿನೊಂದಿಗೆ ಮೃತಪಟ್ಟಿದ್ದಾರೆ.
ಸಂಗೀತಾ ಅವರ ಮೃತದೇಹ ವನ್ನು ಮೇಲೆತ್ತಲಾಗಿದ್ದು, ಮಗುವಿನ ಮೃತದೇಹವನ್ನು ಹೊರ ತೆಗೆಯುವ ಪ್ರಯತ್ನ ನಡೆಯುತ್ತಿದೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment