ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೌಖಿಕ ಆಧಾರಗಳನ್ನೇ ಬಳಸಿಕೊಂಡು ಇತಿಹಾಸ ಚಿತ್ರಿಸಿದ ಬಿ ಎ ಸಾಲೆತ್ತೂರ್

ಮೌಖಿಕ ಆಧಾರಗಳನ್ನೇ ಬಳಸಿಕೊಂಡು ಇತಿಹಾಸ ಚಿತ್ರಿಸಿದ ಬಿ ಎ ಸಾಲೆತ್ತೂರ್

ವಿವಿ ಕಾಲೇಜು: ವಿಶೇಷ ಉಪನ್ಯಾಸದಲ್ಲಿ ಡಾ. ಬಿ ಜಗದೀಶ್ ಶೆಟ್ಟಿ ಅಭಿಮತ 



ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘದ (ಮಾನುಷಾ) ಸಹಯೋಗದೊಂದಿಗೆ ಆಯೋಜಿಸುತ್ತಿರುವ ತುಳುನಾಡು ಮತ್ತು ಕೊಡಗು ಇತಿಹಾಸ ಕುರಿತ ಸರಣಿ ಉಪನ್ಯಾಸಗಳ ಮೂರನೇ ಭಾಗ ಶನಿವಾರ ವರ್ಚುವಲ್ ಮಾದರಿಯಲ್ಲಿ ನಡೆಯಿತು.


'ತುಳುವ ಇತಿಹಾಸ- ಬಿ ಎ ಸಾಲೆತ್ತೂರ್ ಅವರ ಕೊಡುಗೆಗಳುʼ ಎಂಬ ಕುರಿತು ಮಾತನಾಡಿದ ಉಡುಪಿಯ ಎಂಜಿಎಂ ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ (ಮಾಹೆ) ಆಡಳಿತಾಧಿಕಾರಿ ಡಾ. ಬಿ ಜಗದೀಶ್ ಶೆಟ್ಟಿ, ಅದ್ಭುತ ಜ್ಞಾನಿ, ಇತಿಹಾಸಕಾರ ಸಾಲೆತ್ತೂರು ಅವರಿಗೆ ತುಳುನಾಡು ಪ್ರೀತಿಯ ಕಾರ್ಯಕ್ಷೇತ್ರ. ತುಳುನಾಡಿನ ಸಂಸ್ಕೃತಿ ಗ್ರಾಮ ಜೀವನ ಮತ್ತು ಪಾಡ್ದನಗಳಲ್ಲಿ ಅಡಗಿದೆ ಎಂದು ಅರಿತಿದ್ದ ಅವರು ಮೌಖಿಕ ಆಧಾರಗಳನ್ನೇ ಬಳಸಿಕೊಂಡು ಈ ಭಾಗದ ಇತಿಹಾಸ ಚಿತ್ರಿಸಿದರು. ತುಳು ಭಾಷೆ, ಆಚರಣೆಗಳು, ಆಳಿದ ರಾಜವಂಶಗಳು, ಸಾಗರ ವ್ಯಾಪಾರ, ಇಲ್ಲಿ ನೆಲೆಯೂರಿದ್ದ ಬೌದ್ಧ ಧರ್ಮ, ಇತರ ಧಾರ್ಮಿಕ ಪದ್ಧತಿಗಳ ಕುರಿತು ಮಾಹಿತಿ ಕಲೆಹಾಕಲು ಅವರು ವಹಿಸಿದ ಶ್ರಮ ಅನುಕರಣೀಯ, ಎಂದರು.


ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅವರು, ಉಪನ್ಯಾಸ ಸರಣಿ ಈ ಭಾಗದ ಇತಿಹಾಸವನ್ನು ಅರಿಯುವಲ್ಲಿ ದೊಡ್ಡ ಕೊಡುಗೆ ನೀಡುತ್ತಿದೆ, ಎಂದರು.


ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಯೋಜಕ ಡಾ. ಗಣಪತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಎಂ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ರತನ್ ಧನ್ಯವಾದ ಸಮರ್ಪಿಸಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಇತಿಹಾಸಕಾರರು, ಸಂಶೋಧಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم