ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಗವದ್ಗೀತಾ ಸರಣಿ ಉಪನ್ಯಾಸ ಮಾಲಿಕೆ ಸಮಾರೋಪ

ಭಗವದ್ಗೀತಾ ಸರಣಿ ಉಪನ್ಯಾಸ ಮಾಲಿಕೆ ಸಮಾರೋಪ

 


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದ ಸಂಸ್ಕøತ ಮತ್ತು ತತ್ತ್ವಶಾಸ್ತ್ರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸಂsಸ್ಕೃತ ಮಾಸಾಚರಣೆ ಹಾಗೂ ಶ್ರೀಕೃಷ್ಣ ಜನ್ಮೋತ್ಸವ ಸಂಭ್ರಮ ಪ್ರಯುಕ್ತ ಶ್ರೀಮದ್ಭಗವದ್ಗೀತೆಯ ಬಗೆಗಿನ ಮೂರು ದಿನದ ಉಪನ್ಯಾಸ ಮಾಲಿಕೆಯ ಸಮಾರೋಪ ಆ.29ರಂದು ಸಂಜೆ 6:30ಕ್ಕೆ ನಡೆಯಲಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಡಾ.ಜಿ.ಎನ್.ಭಟ್ ಹರಿಗಾರು ‘ಜ್ಞಾನ’ ಎಂಬ ವಿಷಯದ ಬಗೆಗೆ ಉಪನ್ಯಾಸ ನೀಡಲಿದ್ದಾರೆ.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಹಾಗೂ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಉಪಸ್ಥಿತರಿರುವರು. ಕಾರ್ಯಕ್ರಮವು ಆನ್ ಲೈನ್ ವೇದಿಕೆ ಮೂಲಕ ನಡೆಯಲಿದೆ. 


ಆಸಕ್ತರು ಈ ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದು ಪ್ರಕಟಣೆ ತಿಳಿಸಿದೆ. ಝೂಮ್ ಮೀಟಿಂಗ್ ಐಡಿ : 9884720154 ಪಾಸ್‍ವರ್ಡ್:  6WPUJN


0 تعليقات

إرسال تعليق

Post a Comment (0)

أحدث أقدم