ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಘವೇಂದ್ರ ರಾವ್ ಅವರಿಗೆ ಮ್ಯಾಕ್ಸ್‌ಲೈಫ್‌ ಸಂಸ್ಥೆಯಿಂದ ಸೇವಾರತ್ನ ಪ್ರಶಸ್ತಿ

ರಾಘವೇಂದ್ರ ರಾವ್ ಅವರಿಗೆ ಮ್ಯಾಕ್ಸ್‌ಲೈಫ್‌ ಸಂಸ್ಥೆಯಿಂದ ಸೇವಾರತ್ನ ಪ್ರಶಸ್ತಿ


ಮಂಗಳೂರು: 75ನೇ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಸಮಜದಲ್ಲಿ ಉತ್ತಮ ಸೇವೆಗಳನ್ನು ಮಾಡಿದ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಸೇವಾರತ್ನ ಬಿರುದನ್ನು ನೀಡಲಾಯಿತು. ಮಂಗಳೂರಿನ ಖ್ಯಾತ ನ್ಯಾಯವಾದಿ ಹಾಗೂ ನೋಟರಿ ರಾಘವೇಂದ್ರ ರಾವ್ ಅವರಿಗೆ ಮ್ಯಾಕ್ಸ್ ಲೈಫ್ ಸಂಸ್ಥೆಯು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಅವರ ಉತ್ತಮ ಸೇವೆಗಳನ್ನು ನೆನಪಿಸಿಕೊಳ್ಳಲಾಯಿತು.


ಲಾಕ್ಡೌನ್ ಸಮಯದಲ್ಲಿ ವಿರಾಮಿಸದೆ ಸಾವಿರಾರು ಮಂದಿಗಳಿಗೆ ಆಹಾರ, ಅತ್ಯಾಗತ್ಯ ವಸ್ತುಗಳ ಪೂರೈಕೆ, ಬಡವಿದ್ಯಾರ್ಥಿಗಳಿಗೆ ಪುಸ್ತಕ ಹಾಗು ಲೇಖನಿ ಸಾಮಗ್ರಿಗಳು ಮತ್ತು ಸಮವಸ್ತ್ರ ವಿತರಣೆ, ರಕ್ತದಾನ ಶಿಬಿರ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಹಾಗೂ ಇನ್ನೂ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ತನ್ನ ನಂತರವು ತನ್ನ ಅಂಗಾಂಗಗಳು ಮತ್ತೊಬ್ಬರಿಗೆ ಉಪಯೋಗವಾಗಲಿ ಎಂದು ಬರೆದು ಕೊಟ್ಟು ಇಂದಿನ ಯುವಪೀಳಿಗೆಗೆ ಮಾದರಿ ಏನಿಸಿಕೊಂಡಿದ್ದಾರೆ.                                       


ಮಂಗಳೂರು ಮ್ಯಾಕ್ಸ್ ಲೈಫ್ ನ ಕಛೇರಿ ಮುಖ್ಯಸ್ಥರು ಸತೀಶ್ ಮೆನನ್, ಮ್ಯಾನೇಜರ್  ಆನಂದನ್, ಅಡ್ವೈಸರ್ ಶ್ರೀಮತಿ ಗೀತಾ, ಹಾಗೂ ಸಂಸ್ಥೆಯ ಇತರ ಸಿಬ್ಬಂದಿ ಸಮಾರಂಭ ದಲ್ಲಿ ನೆರೆದಿದ್ದರು. ಲಯನ್ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post