ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾವೂರು: ಪತಿ ಹತ್ಯೆ ಪ್ರಕರಣ- ಆರೋಪಿ ಪತ್ನಿಗೆ ಜಾಮೀನು

ನಾವೂರು: ಪತಿ ಹತ್ಯೆ ಪ್ರಕರಣ- ಆರೋಪಿ ಪತ್ನಿಗೆ ಜಾಮೀನು


ಬಂಟ್ವಾಳ: ಇಲ್ಲಿನ ನಾವೂರು ಗ್ರಾಮದ ಸೂರ ಕ್ವಾರ್ಟರ್ಸ್‌ ಎಂಬಲ್ಲಿ ಕಳೆದ ಮಾ.5ರಂದು ರಾತ್ರಿ ಕತ್ತಿಯಿಂದ ಕಡಿದು ಪತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ಉಮಾವತಿಗೆ ಜಿಲ್ಲಾ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.


ಹಲವು ದುಶ್ಚಟ ಹೊಂದಿದ್ದ ಪತಿ ಸೇಸಪ್ಪ ಪೂಜಾರಿ (50) ಕಳೆದ ಮಾ.3ರಂದು ರಾತ್ರಿ ಮನೆಯಲ್ಲಿ ಪತ್ನಿ ಉಮಾವತಿಗೆ ಅವಾಚ್ಯ ಶಬ್ಧಗಳಿಂದ ಬೈದು ತಲೆಗೆ ಹಲ್ಲೆ ನಡೆಸಿದ್ದರು. ಮಾ.5ರಂದು ರಾತ್ರಿ ಮತ್ತೆ ಪರಸ್ಪರ ಗಲಾಟೆ ನಡೆದು ಪತ್ನಿ ಉಮಾವತಿ ಕತ್ತಿಯಿಂದ ಕಡಿದು ಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.


ಮೃತರ ಪುತ್ರಿ ನಯನ ನೀಡಿದ ದೂರಿನಂತೆ ಆರೋಪಿ ಉಮಾವತಿ ಜೈಲು ಸೇರಿದ್ದರು. ಇದೀಗ ಆರೋಪಿ ಬಂಧನದಿಂದ ಅವರನ್ನೇ ನಂಬಿಕೊಂಡ ಪುತ್ರಿ ನಯನ ಇವರಿಗೆ ನ್ಯಾಯ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ನೀಡಬೇಕು ಎಂದು ಆರೋಪಿ ಪರ ವಕೀಲರಾದ ದಂಡೆ ರಾಮಚಂದ್ರ ಶೆಟ್ಟಿ ಮತ್ತು ಚೇತನಾ ಆರ್.ಶೆಟ್ಟಿ ವಾದಿಸಿರುವುದಾಗಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post