ಮಂಗಳೂರು: ರೋಟರಿ ಹಿಲ್ ಸೈಡ್ ಮಂಗಳೂರು ಸಂಸ್ಥೆಯವರು ತಮ್ಮ ಸಮಾಜ ಸೇವಾ ಕಾರ್ಯಕ್ರಮದಡಿ ಪಿಯುಸಿಯಲ್ಲಿ ಕಾಲೇಜಿಗೇ ಟಾಪರ್ ಆಗಿ ಸ್ವರ್ಣಪದಕ ವಿಜೇತೆಯಾದ ವಿದ್ಯಾರ್ಥಿನಿಯು ಪದವಿ ಸೇರಲು ಆರ್ಥಿಕವಾಗಿ ಅಶಕ್ತಳಾದಾಗ ಕಾಲೇಜು ಫೀಸನ್ನು ಭರಿಸುವ ಮೂಲಕ ಆಕೆಗೆ ಸಹಾಯಹಸ್ತವನ್ನು ಚಾಚಿದ್ದಾರೆ.
2020-21 ರ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ 97% ಅಂಕ ಗಳಿಸಿರುವ ಕುಮಾರಿ ಸೌಮ್ಯಾ ಬಿ ಇವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತನ್ನ ತಂದೆಯ ಅಶಕ್ತ ಪರಿಸ್ಥಿತಿಯಿಂದಾಗಿ ಓದು ಮುಂದುವರೆಸುವ ನಿಟ್ಟಿನಲ್ಲಿ ಅಸಹಾಯಕರಾಗಿದ್ದರು. ಈ ಸಂದರ್ಭದಲ್ಲಿ ದಾನಿಗಳಾದ ವೆಂಕಟೇಶ ಪಿ ಶೆಣೈಯವರು ಮುಂದೆ ಬಂದು ತಮ್ಮ ಹೆತ್ತವರಾದ ಕುಡ್ಗಿ ಪ್ರಭಾಕರ ಶೆಣೈ ಹಾಗೂ ಶ್ರೀಮತಿ ಪ್ರಭಾ ಪಿ ಶೆಣೈಯವರ ಹೆಸರಲ್ಲಿ ರೂ.41,350/- ರಷ್ಟು ವಿದ್ಯಾರ್ಥಿವೇತನವನ್ನು ರೋಟರಿ ಮಂಗಳೂರು ಹಿಲ್ ಸೈಡ್ ಟ್ರಸ್ಟ್ ಮೂಲಕ ಕುಮಾರಿ ಸೌಮ್ಯಾ ಬಿ ಇವರಿಗೆ ನೀಡಿದ್ದಾರೆ. ಇನ್ನು ಮುಂದಿನೆರಡು ವರ್ಷಗಳಲ್ಲೂ ಕಾಲೇಜು ಫೀಸನ್ನು ಭರಿಸುವ ಭರವಸೆಯನ್ನಿತ್ತಿದ್ದಾರೆ.
ರೋಟರಿ ಅಧ್ಯಕ್ಷರಾದ ರೊ.ಪ್ರವೀಣ್ ಚಂದ್ರ ಶರ್ಮ ಹಾಗೂ ರೋಟರಿ ಹಿಲ್ಸೈಡ್ ಚಾರಿಟಿ ಟ್ರಸ್ಟಿನ ಅಧ್ಯಕ್ಷರಾದ ರೊ.ಸುರೇಶ ಕಿಣಿಯವರು ಸದಸ್ಯರ ಉಪಸ್ಥಿತಿಯಲ್ಲಿ ವಿದ್ಯಾರ್ಥಿನಿಗೆ ಚೆಕ್ಕನ್ನು ಹಸ್ತಾಂತರಿಸಿದರು. ವಿದ್ಯಾರ್ಥಿನಿಯ ಹೆತ್ತವರು ದಾನಿಗಳಾದ ವೆಂಕಟೇಶ ಪಿ ಶೆಣೈಯವರಿಗೆ ಹೃದಯಾಂತರಾಳದ ಧನ್ಯವಾದಗಳನ್ನು ಸಮರ್ಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق