ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಹಿಲ್-ಸೈಡ್ ವತಿಯಿಂದ ಪ್ರತಿಷ್ಠಿತ ಐಟಿ ಕಂಪನಿ ಕಾಗ್ನಿಸೆಂಟ್ ಪ್ರಾಯೋಜಕತ್ವದಲ್ಲಿ 20 ಕಂಪ್ಯೂಟರ್ ಗಳನ್ನು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಬಲ್ಮಠ-ಮಂಗಳೂರು ಇಲ್ಲಿಗೆ ಹಸ್ತಾಂತರಿಸಲಾಯಿತು.
ಪ್ರಾಂಶುಪಾಲರಾದ ಡಾ।ಜಗದೀಶ ಬಾಳರವರು ಸ್ವಾಗತಿಸಿ ಮಾತನಾಡಿ, ತಮ್ಮ ಕಾಲೇಜಿನ ವಿದ್ಯಾರ್ಥಿನಿಯರ ಕೌಶಲ್ಯಾಭಿವೃದ್ಧಿಯ ಉನ್ನತಿಗೆ ಇದು ಪೂರಕವಾಗಲಿದೆ ಎಂದರು. ಕಂಪ್ಯೂಟರ್ ಹಸ್ತಾಂತರಿಸಿದ ರೋಟರಿ ಜಿಲ್ಲಾ ಉಪ ಗವರ್ನರ್ ರೊ.ರಾಘವೇಂದ್ರ ರವರು ಕಾಲೇಜಿನ ಅಭಿವೃದ್ಧಿಗಾಗಿ ಇನ್ನು ಮುಂದೆಯೂ ಯುಕ್ತ ರೀತಿಯಲ್ಲಿ ಸಹಕರಿಸುವುದಾಗಿ ತಿಳಿಸಿದರು.
ರೋಟರಿ ಅಧ್ಯಕ್ಷ ಪ್ರವೀಣಚಂದ್ರ ಶರ್ಮರು ಕಾಲೇಜಿನ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ರೋಟರಿಯ ಪಾತ್ರವನ್ನು ವಿವರಿಸಿದರು.
ಕಾರ್ಯದರ್ಶಿ ರೊ.ಮನೀಶ್ ರಾವ್, ವಲಯ ಸೇನಾನಿ ರೊ.ಸತೀಶ್ ಬಿಕೆ, ಸಮುದಾಯ ಸೇವಾ ನಿರ್ದೇಶಕ ರೊ.ಅಶೋಕ ರಾವ್, ರೊ.ರಂಗನಾಥ ಕಿಣಿ, ರೊ.ಡಾ।ಅಬ್ರಹಾಂ ಝಕಾರಿಯಾಸ್, ರೊ.ಶ್ಯಾಮಲಾಲ್ ವೈ, ರೊ.ವಿಷ್ಣುದಾಸ ಶೇವಗೂರ್,ರೊ.ಸಾಗರ್ ಪಟೇಲ್,ರೊ.ಎಸ್.ಸಿ.ವರ್ಮ, ರೊ.ದಿನೇಶ ಕುಮಾರ್, ರೊ.ಸುಧಾಕರ ಎಂ, ರೊ.ಬಾಲಸುಬ್ರಹ್ಮಣ್ಯ ಹಾಗೂ ಕಾಲೇಜಿನ ಪ್ರೊ.ಮಹಮ್ಮದ್ ಫಯಾಜ್, ಡಾ. ಶ್ರೀನಿವಾಸಯ್ಯ ರವರು ಉಪಸ್ಥಿತರಿದ್ದರು. ಕೊನೆಯಲ್ಲಿ ರೊ. ಸತೀಶ ಬಿಕೆ ಯವರು ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment