ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೋಟರಿ ಹಿಲ್‌ಸೈಡ್‌ ವತಿಯಿಂದ ಮಕ್ಕಳ ವೈದ್ಯೆ ಡಾ. ಮೀರಾ ಎ ರಾವ್‌ ಅವರಿಗೆ ಸನ್ಮಾನ

ರೋಟರಿ ಹಿಲ್‌ಸೈಡ್‌ ವತಿಯಿಂದ ಮಕ್ಕಳ ವೈದ್ಯೆ ಡಾ. ಮೀರಾ ಎ ರಾವ್‌ ಅವರಿಗೆ ಸನ್ಮಾನ



ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಹಿಲ್-ಸೈಡ್ ವತಿಯಿಂದ ವಿಶ್ವ ಮಹಿಳಾ ಸಮಾನತಾ ದಿನದ ಆಚರಣೆಯ ಪ್ರಯುಕ್ತ ನಗರದ ಪ್ರಖ್ಯಾತ ಮಕ್ಕಳ ವೈದ್ಯೆ ಡಾ.ಮೀರಾ ಎ ರಾವ್ ಇವರನ್ನು ಸನ್ಮಾನಿಸಲಾಯಿತು.


ರೋಟರಿ ಹಿರಿಯ ಸದಸ್ಯ ಹಾಗೂ ನರರೋಗ ತಜ್ಞರಾದ ಡಾ.ಸಿ.ಕೆ.ಬಳ್ಳಾಲರು ಈ ಸಂದರ್ಭದಲ್ಲಿ ಮಾತನಾಡಿ ಡಾ.ಮೀರಾರವರ ಸರಳತೆ ಹಾಗೂ ಸೇವೆಯಲ್ಲಿನ ಸಮರ್ಪಣಾ ಮನೋಭಾವವನ್ನು ಕೊಂಡಾಡಿದರು.


ರೋಟರಿ ಅಧ್ಯಕ್ಷ ಪ್ರವೀಣಚಂದ್ರ ಶರ್ಮ, ಕಾರ್ಯದರ್ಶಿ ರೊ.ಮನೀಶ್ ರಾವ್ ಹಾಗೂ ನಿಯೋಜಿತ ಅಧ್ಯಕ್ಷ ರೊ.ಶ್ಯಾಮಲಾಲ್ ವೈ ಅವರು ಜತೆಯಾಗಿ ವೈದ್ಯೆ ಡಾ.ಮೀರಾ ಎ ರಾವ್ ಇವರನ್ನು ಸನ್ಮಾನಿಸಿ ಪ್ರಶಂಸಾ ಫಲಕವನ್ನಿತ್ತರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post