ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಖ್ಯಮಂತ್ರಿ ಬೊಮ್ಮಾಯಿಯವರ ಸಮಯೋಚಿತ ನಿರ್ಧಾರ ಈಗ ಅಧಿಕೃತ ಆದೇಶ

ಮುಖ್ಯಮಂತ್ರಿ ಬೊಮ್ಮಾಯಿಯವರ ಸಮಯೋಚಿತ ನಿರ್ಧಾರ ಈಗ ಅಧಿಕೃತ ಆದೇಶ



ಸರ್ಕಾರಿ ಸಮಾರಂಭಗಳಲ್ಲಿ ಹೂ ಹೂಗುಚ್ಛ, ಹೂ ಮಾಲೆ, ಹಾರ ತುರಾಯಿ ಪೇಟ ಸ್ಮರಣಿಕೆ ಕೊಡುವಂತಿಲ್ಲ...!!


ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಅನಗತ್ಯ ವೆಚ್ಚದಲ್ಲಿ ಶೇಕಡಾ 5% ನ್ನು ಉಳಿಸಬೇಕೆಂಬ ಸೂಚನೆ ಕೊಟ್ಟಿದ್ದರು. ಈ ಆದೇಶವೂ ಅದರ ಭಾಗವೇ ಆಗಿದೆ.


ಎರಡನೆಯದಾಗಿ ಮುಖ್ಯಮಂತ್ರಿಯವರ ಜಿಲ್ಲಾ ಭೇಟಿಯ ಸಂದರ್ಭಗಳಲ್ಲಿ ಪ್ರತೀ ಬಾರಿಯೂ ಗಾರ್ಡ್ ಆಫ್ ಆನರ್ ಬೇಡ ಎಂಬ ಸೂಚನೆಯನ್ನೂ ಬೊಮ್ಮಾಯಿಯವರು ಕೊಟ್ಟಿದ್ದಾರೆ. ಇದೂ ಸಾಂದರ್ಭಿಕವೇ ಆಗಿದೆ.‌ ನಾಡಿನ ಒಳಿತಿಗಾಗಿ ಕೆಲಸ ಹೆಚ್ಚು ಮಾಡಬೇಕಾಗಿದೆ. ಇಂತಹ ಓಬೀರಾಯನ ಕಾಲದ ಕೆಲವು ಸಂಪ್ರದಾಯಗಳಲ್ಲೇ ನಮ್ಮ ಜನಪ್ರತಿನಿಧಿಗಳ ಅಮೂಲ್ಯ ಕಾಲ ಹರಣವಾಗ್ತದೆ. ಇದನ್ನು ತಪ್ಪಿಸಲೇ ಬೇಕಾಗಿದೆ.


ಇನ್ನೊಂದು ಸೂಚನೆಯನ್ನೂ ಮಾನ್ಯ ಮುಖ್ಯಮಂತ್ರಿಗಳು ಮುಂದೆ ಕೊಡ್ಬೇಕು ಅನ್ನಿಸ್ತದೆ.  ಯಾವುದೇ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ಉಪಸ್ಥಿತರಿರುವವರನ್ನು ಅವರೇ ಇವರೇ  ಅಂತ ಪ್ರತ್ಯೇಕವಾಗಿ ಸಂಬೋಧಿಸುವ ಅಪದ್ಧ ಪರಿಪಾಠ ನಿಲ್ಬೇಕು. ಒಂದೇ ಮಾತಿನಲ್ಲಿ ಎಲ್ಲರನ್ನೂ ಮಹನೀಯರೇ ಎಂಬಿತ್ಯಾದಿ ಉಲ್ಲೇಖಿಸಿದರೆ ಜನಪ್ರತಿನಿಧಿಗಳಿರುವ ಸಭಾ ಕಾರ್ಯಕ್ರಮಗಳು ಸಮಯ ಅರ್ಧಕ್ಕರ್ಧ ಉಳೀತವೆ. ಹೆಚ್ಚು ಕೆಲಸ ಹೆಚ್ಚು ಸಾಧನೆ ನಮ್ಮೆಲ್ಲರ ಧ್ಯೇಯವಾಗಬೇಕು. ಕೆಲಸ ಮಾತಾಡಲಿ; ಮಾತೇ ಕೆಲಸವಾಗೋದು ಬೇಡ. ಹಾಗಂತ ಹೇಳ್ಬೇಕಾಗಿರೋದನ್ನು ಅವಶ್ಯವಾಗಿ ಹೇಳಲಿ. ನೋಡೋಣ ಇಂಥ ತೀರ್ಮಾನಗಳೂ ಮುಂದೊಂದು ದಿನ ಬಂದಾವು.

-ಜಿ. ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم