ಹರಿಹರ: ಇಲ್ಲಿನ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ನವಜಾತ ಗಂಡು ಶಿಶು ಮೃತಪಟ್ಟಿದ್ದು, ಇದಕ್ಕೆಲ್ಲ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೆಂದು ಪೋಷಕರು ಹಾಗೂ ಸಂಬಂಧಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಆಶ್ರಯ ಕಾಲೋನಿ ನಿವಾಸಿ ಕಾವ್ಯ ಅವರು ಹೆರಿಗೆಗಾಗಿ ವೈದ್ಯರ ಸಲಹೆ ಮೇರೆಗೆ ಶುಕ್ರವಾರ ದಂದು ಆಸ್ಪತ್ರೆಗೆ ದಾಖಲಾಗಿದ್ದರು.
ಶನಿವಾರ ಬೆಳಿಗ್ಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಶಿಶುವನ್ನು ಇನ್ಕ್ಯೂಬೇಟರ್‌ನಲ್ಲಿ ಇರಿಸುವಂತೆ ಶುಶ್ರೂಷಕಿಗೆ ಸೂಚಿಸಿದ್ದರು.
ವೈದ್ಯರ ಸಲಹೆಯಂತೆ ಹೆರಿಗೆ ವಿಭಾಗದ ಶುಶ್ರೂಷಕಿ ಮಾಡಿದ್ದರು. ನಂತರ ಶಿಶುವನ್ನು ಪರೀಕ್ಷಿಸಿದಾಗ ಶಿಶು ಮೃತಪಟ್ಟಿರುವುದು ತಿಳಿದು ಬಂದಿದೆ.
Post a Comment