ಬಂಟ್ವಾಳ: ಏಕಾಂಗಿಯಾಗಿ ವಾಸವಾಗಿದ್ದ 52 ವರ್ಷದ ವಿಧವೆಯನ್ನು ಕೂಡಿ ಹಾಕಿ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಒಡ್ಡಿದ ಘಟನೆಯೊಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದೂರು ದಾಖಲಾಗಿದೆ.
ಸಿದ್ದಕಟ್ಟೆ ಅನಿಲ್ ಎಂಬಾತ ಅತ್ಯಾಚಾರ ಆರೋಪಿಯಾಗಿದ್ದು, ಇದೀಗ ಈತ ತಲೆಮರೆಸಿಕೊಂಡಿದ್ದಾನೆ.
ಅಗಸ್ಟ್ 11 ರಂದು ಘಟನೆಯೊಂದು ನಡೆದಿದ್ದು ತಡವಾಗಿ ಮಾಹಿತಿ ತಿಳಿದು ಬಂದಿದೆ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಬಡಪಾಯಿ ಮಹಿಳೆ ಅತ್ಯಾಚಾರಕ್ಕೆ ಒಳಗಾದವರು.
ಅತ್ಯಾಚಾರ ಮಾಡಿದ ಬಳಿಕ ಯಾರಿಗೂ ತಿಳಿಸಿದರೆ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಕೇಸು ದಾಖಲಿಸಿಕೊಂಡಿರುವ ಬಂಟ್ವಾಳ ಪೋಲೀಸರು ಅತ್ಯಾಚಾರ ಎಸಗಿ ಪರಾರಿಯಾಗಿರುವ ಆರೋಪಿಗೆ ಬಲೆ ಬೀಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment