ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ರಚಿಸಿದ ನಮ್ಮ ಮಂಗಳೂರು ಪುಸ್ತಕವನ್ನು ಮಂಗಳೂರು ಗೌರವಾನ್ವಿತ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳೂರಿನಲ್ಲಿ ಹಸ್ತಾಂತರಿಸಿದರು.
ಈ ಪುಸ್ತಕದಲ್ಲಿ ಮಂಗಳೂರಿನ ಸಮಗ್ರ ಮಾಹಿತಿ ಒಳಗೊಂಡಿದೆ. ಪುಸ್ತಕದ ಬಗ್ಗೆ ಸಿಎಂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕದಲ್ಲಿ ಏನೇನಿದೆ?
* ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಬರೆದಿರುವ ‘ನಮ್ಮ ಮಂಗಳೂರು’ ಅತ್ಯಪೂರ್ವ ಮಾಹಿತಿಗಳಿರುವ ಅಪರೂಪದ ಕೃತಿ.
* ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಪೂರ್ತಿ ಚಿತ್ರಣ.
* ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ ಹೀಗೆ ಎಲ್ಲಾ ಶ್ರದ್ಧಾ ಕೇಂದ್ರಗಳ ವಿವರಗಳು.
* ಶೈಕ್ಷಣಿಕ ಹಬ್ ಎಂಬ ಹೆಸರುವಾಸಿಯಾಗಿರುವ ಮಂಗಳೂರಿನಲ್ಲಿ ಎಷ್ಟು ಶಾಲೆ, ಕಾಲೇಜು, ವೈದ್ಯಕೀಯ, ಎಂಜೀನಿಯರಿಂಗ್, ವೃತ್ತಿಪರ ಕಾಲೇಜುಗಳಿವೆ ಎಂಬುವುದರ ಡಿಟೈಲ್ಸ್ ನಮ್ಮ ಮಂಗಳೂರು ಗ್ರಂಥದಲ್ಲಿದೆ.
* ಮಂಗಳೂರು ಸುತ್ತಮುತ್ತ ಎಷ್ಟು ಆಸ್ಪತ್ರೆಗಳಿವೆ, ಹೊಟೇಲ್‌ಗಳಿವೆ ಎಂಬುವುದರ ಚಿತ್ರಣ.
* ಮಂಗಳೂರು ಸುತ್ತಮುತ್ತ ಇರುವ ಕೆರೆ, ಮಾರುಕಟ್ಟೆ, ಮೈದಾನ, ಪಾರ್ಕ್, ಕ್ರೀಡಾಂಗಣ, ಸ್ಮಶಾನಗಳ ಮಾಹಿತಿಗಳು
* ನಮ್ಮ ಸಂಸದರು, ಶಾಸಕರು, ಮೇಯರ್, ಉಪಮೇಯರ್, ಕಾರ್ಪೊರೇಟರ್‌ಗಳ ಸಚಿತ್ರ ವಿವರಗಳು.
* ಕಾರ್ಪೊರೇಶನ್‌ನಿಂದ ನಾಗರಿಕರಿಗೆ ಲಭಿಸುವ ಸೌಲಭ್ಯಗಳೇನು, ಅದನ್ನು ಪಡೆದುಕೊಳ್ಳಲು ಏನೇನು ಮಾಡಬೇಕು ಮಾರ್ಗದರ್ಶಿ ಮಾಹಿತಿ.
* ಮಂಗಳೂರಿನ ಅಪರೂಪದ ಫೋಟೋಗಳ ಸಂಗ್ರಹ.
* ಪೊಲೀಸ್ ಠಾಣೆ, ಮಾಧ್ಯಮ ಸಂಸ್ಥೆಗಳುಗಳ ದೂರವಾಣಿ ಸಂಖ್ಯೆಗಳು.
* ಯಾವ ನಂಬರ್‌ನ ಬಸ್ ಎಲ್ಲಿ ಸಂಚರಿಸುತ್ತೆ ಎಂಬುದರ ಮಾಹಿತಿಗಳು.
ಸಂಗ್ರಹ ಯೋಗ್ಯ ಅಪರೂಪದ ಕೃತಿ ನಮ್ಮ ಮಂಗಳೂರು.
ನಮ್ಮ ಮಂಗಳೂರು ಕೃತಿಗಾಗಿ ಸಂಪರ್ಕಿಸಿರಿ: 9343381791/ 9731976777
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment