ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ



ಮಂಗಳೂರು: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲ್ಯಾನ್ ರವರ ನೇತೃತ್ವದಲ್ಲಿ ಉರ್ವಸ್ಟೋರ್ ಮೈದಾನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ.ಪಿ ಆಚಾರ್ಯ ರವರು ಧ್ವಜಾರೋಹಣಗೈದರು.


ಈ ಸಂದರ್ಭದಲ್ಲಿ ಮಾತಾಡಿದ ಪ್ರಕಾಶ್ ಬಿ ಸಾಲ್ಯಾನ್ ಅವರು ಮಾಜಿ ಪ್ರಧಾನಿ ಜವಹರಲಾಲ್ ನೆಹರು ಈ ದೇಶಕ್ಕೆ ನೀಡಿದ ಪಂಚ ವಾರ್ಷಿಕ ಯೋಜನೆಯ ಮಹತ್ವಪೂರ್ಣ ಕೊಡುಗೆಗಳನ್ನು ದೇಶದ ಜನತೆ ಈಗ ನೆನಪು ಮಾಡಿ ಕೊಳ್ಳುತ್ತಿರುವುದು ಕಾಣುತ್ತಿದೆ. ಬಡವ ದೀನ ದಲಿತ, ಹಿಂದುಳಿದ ಸಮಾಜಕ್ಕೆ ಕಾಂಗ್ರೆಸ್ ಕೈಗೊಂಡ ಮಹತ್ವಾಕಾಂಕ್ಷಿ ಯೋಜನೆಗಳಿಂದ ಇಂದು ಹಿಂದುಳಿದ ಸಮಾಜ ಏಳಿಗೆಯಾಗಲು ಮೂಲ ಕಾರಣ ಎಂದು ಹೇಳಲು ಹೆಮ್ಮೆಯನಿಸುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಮಾಜಿ‌ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ಮಹಮ್ಮದ್, ರಜನೀಶ್, ಸೇವಾದಳದ ಉದಯ್ ಕುಂದರ್, ಬಿ.ಜಿ. ಸುವರ್ಣ, ಶೇಖರ್ ಶೆಟ್ಟಿ, ರಘುರಾಜ್ ಕದ್ರಿ, ಭುವನ್ ಡಿ ಕರ್ಕೇರ, ಯೂಸುಫ್ ಉಚ್ಚಿಲ್, ಶಾಂತಲಾ ಗಟ್ಟಿ,  ಯೋಗೀಶ್ ನಾಯಕ್, ಜಯರಾಜ್ ಕೋಟ್ಯಾನ್, ರಿತೇಶ್ ಶಕ್ತಿನಗರ, ಸಮರ್ಥ್ ಭಟ್, ಮೀನಾ ಟೆಲ್ಲಿಸ್, ರೂಪಾ ಚೇತನ್, ಉಷಾ ಬೋಳೂರು, ಮಿಥುನ್, ವಸಂತಿ ಮೋಹನಂಗಯ್ಯ ಸ್ವಾಮಿ, ಉಮೇಶ್ ಕೋಟ್ಯಾನ್, ಜಯರಾಮ್ ಕಾರಂದೂರ್, ಟಿ.ಸಿ.ಗಣೇಶ್, ಮಲ್ಲಿಕಾರ್ಜುನ್ ಕೋಡಿಕಲ್ ನಿರೂಪಿಸಿದರು, ಚೇತನ್ ಪೂಜಾರಿ ವಂದಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم